

ರಾಯಪುರ : ಬೆಲ್ಲಿ ಡ್ಯಾನ್ಸ್ ಒಂದು ನೃತ್ಯ ಪ್ರಕಾರವಾಗಿದ್ದು ಅದನ್ನು ಮಾಡುವುದು ಸುಲಭವಲ್ಲ. ಹಲವಾರು ತಿಂಗಳ ಉತ್ತಮ ತರಬೇತಿ ಪಡೆದ ನಂತರ ಪರಿಪೂರ್ಣತೆಯಿಂದ ಈ ನೃತ್ಯ ಮಾಡಲು ಸಾಧ್ಯವಾಗುತ್ತದೆ. ಬಾಲಿವುಡ್ನ ಕೆಲ ಸೆಲಿಬ್ರಿಟಿಗಳು ಬೆಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡಿರುತ್ತೀರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್(VIdeo Viral) ಆಗಿದೆ. ಅದರೆ ಈ ನೃತ್ಯದಲ್ಲಿ ವಿಶೇಷತೆ ಇದೆ. ಅದನ್ನು ಕಂಡು ನೆಟ್ಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಓಂಕಾರ' ಚಿತ್ರದ 'ನಮಕ್ ಇಷ್ಕ್ ಕಾ' ಹಾಡಿಗೆ ಹುಡುಗಿ ಬೆಲ್ಲಿ ಡ್ಯಾನ್ಸ್ ಮಾಡಿರುವುದನ್ನು ನೋಡಬಹುದು. ಆದರೆ ಡ್ಯಾನ್ಸ್ ಮಾಡುವಾಗ ಆ ಹುಡಗಿ ತನ್ನ ತಲೆಯ ಮೇಲೆ ಕತ್ತಿಯನ್ನು ಇಟ್ಟುಕೊಂಡಿದ್ದಾಳೆ. ಅದನ್ನು ಬ್ಯಾಲೆನ್ಸ್ ಮಾಡುತ್ತಾ ಬೆಲ್ಲಿ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋ ಛತ್ತೀಸ್ಗಢದಿಂದ ಬಂದಿದೆ ಎನ್ನಲಾಗಿದೆ.
ಈ ಖಡ್ಗವು 10 ವರ್ಷಕ್ಕಿಂತ ಹಳೆಯದಾಗಿದೆ ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ಪೋಸ್ಟ್ನ್ನು 2 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋವನ್ನು 1 ಲಕ್ಷ 80 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ಬೀರುವಿನ ಗಾಜು ಒಡೆದಿದ್ದರೆ ಅದನ್ನು ಪರಿಶೀಲಿಸಿ, ನೃತ್ಯವನ್ನು ನೋಡಿ ನನ್ನ ಆತಂಕದ ಮಟ್ಟವು ಎಲ್ಲಿಗೋ ತಲುಪಿತು, ನಿಮ್ಮ ನೃತ್ಯವು ಶ್ಲಾಘನೀಯ ಕತ್ತಿಯನ್ನು ಬಹುಶಃ ಗಮ್ನಿಂದ ತಲೆಗೆ ಅಂಟಿಸಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)