ವಧುವಿನ ಇಂತಹ ಎಂಟ್ರಿ ನೀವೆಂದೂ ನೋಡಿರಲಿಕ್ಕಿಲ್ಲ…ವಿದ್ಯಾರ್ಥಿಗಳು ತರಗತಿಯಲ್ಲಿ ಮಾಡಿರುವ ವಿಡಿಯೋ ಸಖತ್ ವೈರಲ್

viral
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಅನೇಕ ತಮಾಷೆಯ ವಿಡಿಯೋಗಳು ಕಾಣಸಿಗುತ್ತವೆ. ಅದರಲ್ಲಿ ಕೆಲವು ವಿಡಿಯೋ ಅಥವಾ ರೀಲ್ಸ್ ಸಖತ್ ವೈರಲ್ ಆಗುತ್ತವೆ. ಇದೀಗ ಅಂತಹ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಕೆಲವು ಹುಡುಗರು ತರಗತಿಯಲ್ಲಿ ಮದುವೆಯಲ್ಲಿ ವಧುವಿನ ಪ್ರವೇಶ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ಸ್ ಪಡೆಯುತ್ತಿದ್ದು, ವಿಡಿಯೋ ತುಂಬಾ ತಮಾಷೆಯಾಗಿದೆ. ಇದನ್ನು ನೋಡಿ ಜನರಿಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತರಗತಿಯಲ್ಲಿ ಶಿಕ್ಷಕರಿಲ್ಲ ಮತ್ತು ವಿದ್ಯಾರ್ಥಿಗಳು ಕೂಡ ಹೆಚ್ಚು ಕಾಣಿಸುತ್ತಿಲ್ಲ. ಈ ಮಧ್ಯೆ, ಕೆಲವು ವಿದ್ಯಾರ್ಥಿಗಳು ರೀಲ್ಸ್ ಮಾಡುವ ಆಲೋಚನೆ ಮಾಡಿ, ನಕಲಿ ಮದುವೆ ಮಾಡಲು ಆಯೋಜಿಸಿದ್ದಾರೆ. ಈ ವಿಡಿಯೋದ ಬ್ಯಾಕ್ ಗ್ರೌಂಡ್​​​ನಲ್ಲಿ ವಿಭಿನ್ನ ಹಾಡುಗಳೂ ಪ್ಲೇ ಆಗುತ್ತಿವೆ.

ಈ ವಿಡಿಯೋದ ಆರಂಭದಲ್ಲಿ ವಿದ್ಯಾರ್ಥಿಗಳು ಮೊದಲು ವಧುವಿನ ಪ್ರವೇಶವನ್ನು ತೋರಿಸುತ್ತಾರೆ. ನಂತರ ಮದುವೆಯ ವಿಧಿವಿಧಾನಗಳನ್ನು ಒಂದೊಂದಾಗಿ ಅಭಿನಯಿಸಿ ತೋರಿಸುತ್ತಾರೆ. ಇದರಲ್ಲಿ ಮಾಲೆ ಬದಲಾವಣೆ, ಕನ್ಯಾದಾನ, ಏಳು ಸುತ್ತು ಮತ್ತು ಪ್ರವೇಶದ ನಂತರ ಬೀಳ್ಕೊಡುಗೆ ತೋರಿಸಲಾಗಿದೆ. ಈ ಸಂಪೂರ್ಣ ವಿಡಿಯೋ ತುಂಬಾ ತಮಾಷೆಯಾಗಿದೆ.

ನಕಲಿ ಮದುವೆಯಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ನಗುತ್ತಾ, ಮೋಜು ಮಸ್ತಿ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿಯವರೆಗೆ ಕೋಟ್ಯಾಂತರ ಜನರು ಈ ವಿಡಿಯೋವನ್ನು ನೋಡಿದ್ದಾರೆ ಮತ್ತು ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಕೆಲವು ಬಳಕೆದಾರರು ಈ ವಿಡಿಯೋಗೆ ತಮಾಷೆಯಾಗಿ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಓರ್ವ ಬಳಕೆದಾರ "ಮದುವೆಯ ಸಂಪೂರ್ಣ ಆಲ್ಬಮ್ ಅನ್ನು ತೋರಿಸಿದ್ದಾರೆ" ಎಂದು ಹೇಳಿದ್ದರೆ, ಮತ್ತೆ ಕೆಲವು ಬಳಕೆದಾರರು ತಮ್ಮ ಶಾಲಾ ದಿನಗಳು ಮತ್ತು ಸ್ನೇಹಿತರನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಾರೆ ಈ ವಿಡಿಯೋವನ್ನು ನೋಡಿದ ನಂತರ ಎಲ್ಲರೂ ತಮ್ಮ ಶಾಲೆ ಮತ್ತು ಸ್ನೇಹಿತರನ್ನು ಮಿಸ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net