

ಬಾಡಿಬಿಲ್ಡರ್ ಎಂದಾಕ್ಷಣ ನಮಗೆ ಥಟ್ ಅಂಥಾ ನೆನಪಿಗೆ ಬರುವುದು ಪುರುಷರು ಮಾತ್ರ. ಆದರೆ ಒಬ್ಬ ಮಹಿಳೆ ಬಾಡಿಬಿಲ್ಡರ್ ಆಲೋಚನೆಯೇ ಇರುವುದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Video Viral) ಆಗುತ್ತಿದೆ. ಅದರಲ್ಲಿ ಲೇಡಿ ಬಾಡಿಬಿಲ್ಡರ್ ಮದುಮಗಳ ಲುಕ್ನಲ್ಲಿ ಬೈಸೆಪ್ಸ್ ತೋರಿಸುವುದು ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ವೈರಲ್ ವಿಡಿಯೋದಲ್ಲಿ ಮಹಿಳಾ ಬಾಡಿಬಿಲ್ಡರ್ ಲುಕ್ ನೋಡಿ ಜನರ ಆಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಆಶ್ಚರ್ಯಕ್ಕೆ ಕಾರಣವಾಗಿದ್ದು ಮಹಿಳೆ ಬಲವಾದ ಮೈಕಟ್ಟು ಮಾತ್ರವಲ್ಲ ಅವರ ವಧುವಿನ ನೋಟ. ಆಭರಣಗಳೊಂದಿಗೆ ವಧುವಿನಂತೆ ಅಲಂಕರಿಸಿಕೊಂಡಿರುವುದನ್ನು ನೋಡಬಹುದು. ಆದರೆ ಅವರ ಬಲವಾದ ದೇಹವು ದೇಹದಾರ್ಢ್ಯದ ವಿಷಯದಲ್ಲಿ ಅವರು ಹುಡುಗರಿಗಿಂತ ಹಿಂದೆ ಇಲ್ಲ ಎಂದು ತೋರಿಸುತ್ತದೆ.
ಈ ವಿಡಿಯೋದಲ್ಲಿರುವ ಮಹಿಳೆಯನ್ನ ಚಿತ್ರಾ ಪುರುಷೋತ್ತಮ್, ಅವರು ಕರ್ನಾಟಕದ ಜನಪ್ರಿಯ ಬಾಡಿಬಿಲ್ಡರ್ ಎಂದು ಹೇಳಲಾಗುತ್ತಿದೆ. ಇವರು ಮಿಸ್ ಇಂಡಿಯಾ ಫಿಟ್‌ನೆಸ್ ಮತ್ತು ವೆಲ್‌ನೆಸ್, ಮಿಸ್ ಸೌತ್ ಇಂಡಿಯಾ ಮುಂತಾದ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಗೆದ್ದಿದ್ದಾರೆ ಎನ್ನಲಾಗಿದೆ.
ಈ ವಿಡಿಯೋವನ್ನು ಇದುವರೆಗೂ 13 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಉತ್ತಮ ತಯಾರಿ, ಎಲ್ಲೋ ಯಾವುದೇ AI ಕೆಲಸವೇ?, ಆಭರಣಗಳ ಜತೆಗೆ ಕೆಲವು ಪದಕಗಳು ಸಹ ಅವರ ಕುತ್ತಿಗೆಯಲ್ಲಿ ಇರಬೇಕಿತ್ತು, ಎಷ್ಟು ಉತ್ತಮವಾಗಿ ಬಾಡಿಬಿಲ್ಡ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.