

ಜನರು ಕಾಫಿಯನ್ನು ಹೇಗೆಲ್ಲಾ ಮಾಡಬಹುದು. ಕಾಫಿ ಮಾಡುವ ವಿಧಾನವನ್ನು ಹೇಳಿ ಎಂದರೆ 1 ಅಥವಾ 2 ರೀತಿ ನಮ್ಮಗೆ ಥಟ್ ಎಂದು ಹೊಳೆಯಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಕಾಫಿ ಮಾಡಿರುವ ಶೈಲಿ ವೈರಲ್ (Video Viral) ಆಗಿದೆ. ತಮ್ಮ ಬಳಿ ಇರುವ ಹೊಲಿಗಯಂತ್ರದಲ್ಲಿ ಹೊಸ ಪ್ರಯೋಗ ಮಾಡಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋದಲ್ಲಿ ಹೊಲಿಗೆ ಯಂತ್ರದಲ್ಲಿ ಕಾಫಿ ತಯಾರಿಸುವುದನ್ನು ಕಾಣಬಹುದು. ಸೂಜಿ ಇರುವ ಜಾಗದಲ್ಲಿ ಬೇರೆ ಏನೋ ವಸ್ತುವೊಂದನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಆತ ಕಾಫಿ ಮಾಡಿದ್ದಾನೆ. ಹೊಲಿಗೆ ಯಂತ್ರವು ಪ್ರಾರಂಭವಾದ ತಕ್ಷಣ ಅದು ಕೆಳಭಾಗದಲ್ಲಿ ಕಾಫಿಯನ್ನು ಬೆರೆಸಲು ಪ್ರಾರಂಭಿಸುತ್ತದೆ. ಸುಮಾರು 10 ಸೆಕೆಂಡುಗಳ ಈ ಕ್ಲಿಪ್ನಲ್ಲಿ ವ್ಯಕ್ತಿಯು ಒಂದು ಕಪ್ ಕಾಫಿಯನ್ನು ತೆಗೆದು ಇನ್ನೊಂದು ಕಪ್ ಅನ್ನು ಯಂತ್ರದ ಕೆಳಗೆ ಇಡುವುದನ್ನು ನೋಡಬಹುದು.
ಅಂದ್ಹಾಗೆ ಆ ವ್ಯಕ್ತಿಯು ಕಾಫಿ ಮತ್ತು ಸಕ್ಕರೆಯನ್ನು ಹೊಲಿಗೆ ಯಂತ್ರದ ಸಹಾಯದಿಂದ ಚೆನ್ನಾಗಿ ಬ್ಲೆಂಡ್ ಮಾಡಿದ್ದಾನೆ. ನಂತರ ಅದಕ್ಕೆ ಬಿಸಿ ಹಾಲನ್ನು ಸೇರಿಸಿದ್ದಾನೆ. ಕಾಫಿ ಕುಡಿಯಲು ಸಿದ್ಧವಾಗಿದೆ.
ವೈರಲ್ ಆದಾಗಿನಿಂದ ಇದುವರೆಗೂ ಈ ಪೋಸ್ಟ್ ಅನ್ನು 1 ಕೋಟಿ 40 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 94 ಸಾವಿರ ಲೈಕ್ ಮಾಡಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಭಾರತೀಯ ಜುಗಾಡ್ ನಾವು ಅದರಲ್ಲಿ ಉತ್ತಮರು, ನನ್ನ ಅಧಿಕಾರ ದುರುಪಯೋಗವಾಗುತ್ತಿದೆ, ಭಾರತವು ಆರಂಭಿಕರಿಗಾಗಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಹೊಲಿಗೆ ಯಂತ್ರದ ಸರಿಯಾದ ಬಳಕೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.