VIDEO | ಸಿದ್ಧಿವಿನಾಯಕ ಪ್ರಸಾದದಲ್ಲಿ ಇಲಿಗಳು

Mice Prasad
Published on

ಮುಂಬೈ: ತಿರುಮಲ ಲಡ್ಡು ವಿವಾದದ ನಂತರ ಇದೀಗ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ನೈವೇದ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ದೇವಸ್ಥಾನದ ಪ್ರಸಾದದಲ್ಲಿ (Prasad) ಇಲಿಗಳು(Mice )ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದ ವೀಡಿಯೋ (VIDEO) ವೈರಲ್ ಆಗಿದೆ.

ವೀಡಿಯೋದಲ್ಲಿ ಪ್ರಸಾದ ಇರುವ ಬಾಕ್ಸ್‌ ಕಾಣಿಸಿದೆ. ಪೆಟ್ಟಿಗೆಯ ಒಂದು ಮೂಲೆಯಲ್ಲಿ, ಮರಿ ಇಲಿಗಳು ಕಂಡುಬಂದವು. ಈ ವಿಡಿಯೋ ವೈರಲ್​ ಆಗುತ್ತಿದೆ.

ವಿಡಿಯೋ ಹೊರಬಿದ್ದ ನಂತರ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಸದಾ ಸರ್ವಂಕರ್ ಅವರು ಪ್ರಸಾದದ ಶುದ್ಧತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿ ತೋರಿಸಿರುವ ಸ್ಥಳವು ದೇವಸ್ಥಾನದ ಭಾಗವಲ್ಲ. ನಮ್ಮ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ವೈರಲ್ ಆಗಿರುವ ವಿಡಿಯೋಗೆ ದೇವಸ್ಥಾನದ ಟ್ರಸ್ಟ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದೆ.

ನೀರಿನಿಂದ ಹಿಡಿದು ಕಚ್ಚಾ ವಸ್ತುಗಳವರೆಗೆ ಎಲ್ಲವನ್ನೂ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಪ್ರಸಾದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗಿದೆ. ಸಿದ್ಧಿವಿನಾಯಕನ ದೇವಸ್ಥಾನದಲ್ಲಿ ಪ್ರತಿದಿನ 50,000 ಲಡ್ಡುಗಳನ್ನು ತಯಾರಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಈ ಲಡ್ಡೂಗಳಿಗೆ ಬೇಡಿಕೆ ಹೆಚ್ಚುತ್ತದೆ. ಪ್ರಸಾದವು ಎರಡು 50 ಗ್ರಾಂ ಲಡ್ಡೂ ಪ್ಯಾಕೆಟ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಬಳಸುವ ಪದಾರ್ಥಗಳು ಆಹಾರ ಮತ್ತು ಔಷಧ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿವೆ.

ಆಂಧ್ರಪ್ರದೇಶದ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ (ತಿರುಪತಿ ದೇವಸ್ಥಾನ) ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂಬ ವಿವಾದ ಇನ್ನೂ ಮುಂದುವರೆದಿದೆ. ಲಡ್ಡುಗಳಲ್ಲಿ ಗುಟ್ಕಾ ಪ್ಯಾಕೆಟ್ ತುಂಡುಗಳು ಮತ್ತು ತಂಬಾಕು ತುಂಡುಗಳಿವೆ ಎಂದು ಖಮ್ಮಂನ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net