ಜೈಲಿನಲ್ಲಿ ರಾಜಾರೋಷವಾಗಿ ಪಾರ್ಟಿ ಮಾಡಿದ ಖೈದಿಗಳು! ವಿಡಿಯೋ ವೈರಲ್​ Jail

untitled-design-28-690ddf2f3c9b3
Published on

ಜಾರ್ಖಂಡ್​: ಜಾರ್ಖಂಡ್​ನ ಬಿರ್ಸಾ ಮುಂಡಾ ಕೆಂದ್ರ ಕಾರಾಗೃಹದಲ್ಲಿ (Jail) ಇಬ್ಬರು ಖೈದಿಗಳು ನೃತ್ಯ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆದ ನಂತರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದು ಜೈಲಿನ ಭದ್ರತಾ ವೈಫಲ್ಯದ ಬಗ್ಗೆ ಭಾರೀ ಚರ್ಚೆ ವ್ಯಕ್ತವಾಗಿದೆ.

ವೀಡಿಯೊದಲ್ಲಿರುವ ಖೈದಿಗಳನ್ನು ಬಹುಕೋಟಿ ಮದ್ಯ ಹಗರಣದ ಆರೋಪಿ ವಿಧು ಗುಪ್ತಾ ಮತ್ತು ಜಿಎಸ್‌ಟಿ ಹಗರಣದ ಆರೋಪಿ ವಿಕ್ಕಿ ಭಲೋಟಿಯಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸಾಮಾನ್ಯ ಖೈದಿಗಳಿಗೆ ಲಭ್ಯವಿಲ್ಲದ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಸಭಾಂಗಣದೊಳಗೆ ನೃತ್ಯ ಮಾಡುತ್ತಿದ್ದಾರೆ. ಹಾಗೂ ಇವರು ಜೈಲಿನಲ್ಲಿ ವಿಐಪಿ ಉಪಚಾರವನ್ನು ಅನುಭವಿಸುತ್ತಿದ್ದಾರೆಂದು ಮಾಹಿತಿಗಳು ಹೊರಬಂದಿವೆ.

ಈ ವಿವಾದದ ನಂತರ ಆಡಳಿತವು ಈ ವಿಷಯದ ಬಗ್ಗೆ ತಕ್ಷಣ ತನಿಖೆಯನ್ನು ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಹಾಗಾಗಿ ಸಹಾಯಕ ಜೈಲರ್ ದೇವನಾಥ್ ರಾಮ್ ಮತ್ತು ಜಮದಾರ್ ವಿನೋದ್ ಕುಮಾರ್ ಯಾದವ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಖೈದಿಗಳು ಮೊಬೈಲ್​ ಫೋನ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅಧಿಕಾರಿಗಳು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ.

ಆಡಳಿತಾತ್ಮಕ ಮೂಲಗಳ ಪ್ರಕಾರ, ಈ ಘಟನೆಯು ಜೈಲಿನ ಭದ್ರತೆಯಲ್ಲಿನ ಗಂಭೀರ ಲೋಪಗಳನ್ನು ಬಹಿರಂಗಪಡಿಸುತ್ತದೆ. ಹಾಗೆಯೇ ಜೈಲಿನೊಳಗೆ ಮೊಬೈಲ್​ ಫೋನ್​ ಹೇಗೆ ತರಿಸಿಕೊಂಡಿದ್ದಾರೆ. ಅದನ್ನು ಬಳಸಲು ಅವಕಾಶ ಕಲ್ಪಿಸಿದ ಅಧಿಕಾರಿಗಳು ಯಾರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ವೈರಲ್ ಆಗಿರುವ ಈ ವಿಡಿಯೋ ಜಾರ್ಖಂಡ್‌ನಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಪೋಷಿಸುತ್ತದೆ. ಹಾಗೇ ಪ್ರಭಾವಿ ಖೈದಿಗಳಿಗೆ ವಿಐಪಿ ಸವಲತ್ತುಗಳನ್ನು ನೀಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇನ್ನು ಈ ಘಟನೆ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net