

ಕೊಲ್ಕತ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಭಾರೀ ಬಹುಮತ ಸಾಧಿಸಿ ಗೆದ್ದ ನಂತರ ಹಲವು ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರುತ್ತಿದ್ದಾರೆ. ಟಿಎಂಸಿಯ ನಾಯಕರು ಈ ಕಾರ್ಯಕರ್ತರಿಗೆ ವಿನೂತನ ರೀತಿಯ ಸ್ವಾಗತ ಕೋರಿದ್ದಾರೆ.
ಬೀರ್ಭೂಮ್ನ ಇಲಂಬಜಾರ್ ಬ್ಲಾಕ್ನ ಸ್ಥಳೀಯ ನಾಯಕರು ಬಿಜೆಪಿಯಿಂದ ಟಿಎಂಸಿ ಸೇರುತ್ತಿರುವ ಕಾರ್ಯಕರ್ತರಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಿ, 'ಶುದ್ಧೀಕರಣ' ಮಾಡಿದ್ದಾರೆ. ಈ ರೀತಿ ಸ್ಪ್ರೇ ಮಾಡಿ ಟಿಎಂಸಿ ಬಾವುಟವನ್ನು ಕೈಗೆ ಕೊಟ್ಟು ಕಳುಹಿಸುತ್ತಿರುವ ವಿಡಿಯೋ ತುಣುಕನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)