VIDEO | ರಾಷ್ಟ್ರಗೀತೆ ಕಿವಿಗೆ ಬೀಳುತ್ತಿದ್ದಂತೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಗೌರವಿಸಿದ ಪೈಂಟರ್‌!

Video Of Painters Heartwarming Gesture As National Anthem Starts Playing Viral
Published on

ನವದೆಹಲಿ: ( VIDEO ) ನಮ್ಮ ರಾಷ್ಟ್ರ ಗೀತೆ ಜನ ಗಣ ಮನ ಪ್ರಸಾರವಾದಾಗ ಎದ್ದು ನಿಂತು ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.  ರಾಷ್ಟ್ರಗೀತೆ ಪ್ರಸಾರವಾದಾಗ ತನ್ನ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿ  ಪೈಂಟರ್‌ ಎದ್ದು ನಿಂತಿದ್ದಾನೆ. ಇದೀಗ ವೈರಲ್ ಆಗಿರುವ ವಿಡಿಯೋ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ದೇಶಭಕ್ತಿ ಮೌಲ್ಯ ತಿಳಿಸಲು ಇಷ್ಟು ಸಾಕಲ್ಲವೇ. ಈ ದೃಶ್ಯವೊಂದು ಪ್ರತಿಯೊಬ್ಬರ ಮನಮುಟ್ಟುವಂತಿದೆ.

ಈ ವಿಡಿಯೋದಲ್ಲಿ ಏನಿದೆ?: ಕಾರ್ಮಿಕ ಒಬ್ಬನ್ನು ಎತ್ತರದಲ್ಲಿ ನಿಂತು ಗೋಡೆಗೆ ಬಣ್ಣ ಬಳೆಯುತ್ತಿದ್ದನು. ಇದೇ ವೇಳೆ ರಾಷ್ಟ್ರಗೀತೆ ಪ್ರಸಾರವಾಗಿದೆ. ಎತ್ತರದಲ್ಲಿ ನಿಂತು ಗೋಡೆಗೆ ಬಣ್ಣ ಬಳೆಯುತ್ತಿದ್ದವನು ನಿಂತು ಕೆಲಸ ಮಾಡುತ್ತಿದ್ದರು, ರಾಷ್ಟ್ರಗೀತೆ ಕಿವಿಗೆ ಬೀಳುತ್ತಿದ್ದಂತೆ ಅಲ್ಲೆ ನಿಂತು ರಾಷ್ಟ್ರ ಗೀತೆಗೆ ಗೌರವ ನೀಡಿದ್ದಾನೆ.ಕಾರ್ಮಿಕ ತೋರಿದ ದೇಶಪ್ರೇಮ ಪ್ರತಿಯೊಬ್ಬರ ಮನಮುಟ್ಟುವಂತಾಗಿದೆ.

ಈ ಕುರಿತ ವಿಡಿಯೋವನ್ನು cyberdddd ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಜಾಲತಾಣದಲ್ಲಿ 37 ಮಿಲಿಯನ್ ಮೆಚ್ಚುಗೆಯನ್ನು ಪಡೆದುಕೊಂಡಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಲೇಜಿನಲ್ಲಿ ರಾಷ್ಟ್ರಗೀತೆ ಪ್ರಸಾರವಾಗಬೇಕಾದರೆ ವಿದ್ಯಾರ್ಥಿಗಳು ಅತ್ತಿಂದಿತ್ತ ಓಡಾಡಿಕೊಂಡು, ಮಾತನಾಡುತ್ತಾ ನಿಂತಿರಬೇಕಾದರೆ, ಅಲ್ಲೇ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಪೈಂಟರ್‌ ಒಬ್ಬರು ತನ್ನ ಕೆಲಸವನ್ನು ಪಕ್ಕಕ್ಕಿಟ್ಟು ಎದ್ದು ನಿಲ್ಲುವ ಮೂಲಕ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ದೃಶ್ಯವನ್ನು ಕಾಣಬಹುದು.

ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ಹೋರಹಾಕಿದ್ದು, ಇಂದಿನ ಮಕ್ಕಳು ಕೇವಲ ಉತ್ತಮ ಅಂಕ ಗಳಿಸುವ ಭರದಲ್ಲಿ ನೈತಿಕತೆ ಶಿಷ್ಟಾಚಾರವನ್ನು ಮರೆಯುತ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಅವರಿಗೆ ಮೌಲ್ಯಯುತ ಶಿಕ್ಷಣ ನೀಡುವುದರಿಂದ ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net