VIDEO|ಕೇಬಲ್​ ಮೇಲೆ ಕುಳಿತು ಕಟ್ಟಡದ ಮೇಲೆ ಇಳಿಯಲು ತಿಣುಕಾಡುತ್ತಿದ್ದ ಮರಿ ಲಂಗೂರ್​ ಮುಂದೆ ಏನು ಮಾಡಿತು?

monkey may
Published on

ಕೇಬಲ್​ ಮೇಲೆ ಕುಳಿತು ಕಟ್ಟಡದ ಮೇಲೆ ಇಳಿಯಲು ತಿಣುಕಾಡಿದ ಮರಿ ಲಂಗೂರ್​​ ಅನ್ನು ತಾಯಿ ಲಂಗೂರ್​ ಸುರಕ್ಷಿತವಾಗಿ ಕಟ್ಟದ ಮೇಲೆ ಇಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೇಬಲ್​ ಮೇಲೆ ತಾಯಿ ಹಾಗೂ ಮರಿ ಲಂಗೂರ್​ ಆಗಮಿಸುತ್ತವೆ. ತಾಯಿ ಲಂಗೂರ್​ ತಂತಿಯಿಂದ ಕಟ್ಟಡದ ಮೇಲೆ ಇಳಿಯುತ್ತದೆ. ಕೇಬಲ್​ ಹಾಗೂ ಕಟ್ಟಡದ ನಡುವಿನ ದೂರ ತುಸು ಹೆಚ್ಚು ಇದ್ದ ಹಿನ್ನೆಲೆಯಲ್ಲಿ ಮರಿ ಲಂಗೂರ್​ಗೆ ಸುಲಭವಾಗಿ ಇಳಿಯಲು ಆಗುವುದಿಲ್ಲ. ಹೀಗಾಗಿ ಅದು ಕೇಬಲ್​ ಮೇಲೆ ಕುಳಿತಿರುತ್ತದೆ.

ತಾಯಿ ಲಂಗೂರ್​ ಕೆಲವು ನಿಮಿಷ ಇಳಿಯಬಹುದು ಎಂದು ಕಾಯುತ್ತದೆ. ಹೀಗಿದ್ದರೂ ಅದಕ್ಕೆ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಬಲ್​ ಮೇಲಕ್ಕೆ ಜಿಗಿದು ಯಾವು ರೀತಿ ಇಳಿಯಬೇಕು ಎಂದು ಮರಿ ಲಂಗೂರ್​ಗೆ ತೋರಿಸಿಕೊಟ್ಟು ಧೈರ್ಯ ತುಂಬಿ ಮತ್ತೆ ಕೆಳಕ್ಕೆ ಇಳಿಯುತ್ತದೆ. ಹೀಗಿದ್ದರೂ ಮರಿ ಲಂಗೂರ್​ಗೆ ಇಳಿಯಲು ಸಾಧ್ಯವಾಗುವುದಿಲ್ಲ. ಕೊನೆಗೆ ತಾಯಿ ಲಂಗೂರ್​ ಮತ್ತೊಮ್ಮೆ ಕೇಬಲ್​ ಮೇಲೆ ಜಿಗಿದು ತನ್ನ ತೋಳಿನ ಮೇಲೆ ಮರಿ ಲಂಗೂರ್​ ಕೂರಿಸಿಕೊಂಡು ಕಟ್ಟಡದ ಮೇಲೆ ಸುರಕ್ಷಿತವಾಗಿ ಇಳಿಯುತ್ತದೆ.

ಈ ವಿಡಿಯೋವನ್ನು ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತಿಕ್ರಿಯೆನ್ನು ನೀಡಿದ್ದಾರೆ.
ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net