

ಹಾವುಗಳು ಸಾಮಾನ್ಯವಾಗಿ ಕಪ್ಪೆಗಳು, ಸಣ್ಣ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಹಾವುಗಳು ಮೊದಲು ತಮ್ಮ ವಿಷದಿಂದ ಭೇಟೆಯನ್ನು ಮೂರ್ಛೆ ತಪ್ಪಿಸುತ್ತವೆ. ನಂತರ ಅದನ್ನು ಜೀವಂತವಾಗಿ ನುಂಗುತ್ತವೆ. ಆದರೆ ಈಗ ಆಘಾತಕಾರಿ ವಿಡಿಯೊ ವೈರಲ್ ಆಗುತ್ತಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಹಾವು ತನ್ನ ಬಳಿಗೆ ಯಾವುದೇ ಪ್ರಾಣಿ ಬಂದ್ರೂ ಕೂಡಾ ಅದು ಕಚ್ಚೋಕೆ ಮುಂದಾಗೋದು ಸಹಜ. ಆದ್ರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹಸು ಮತ್ತು ಹಾವು ಸ್ನೇಹಿತರಂತೆ ಈ ವಿಡಿಯೋದಲ್ಲಿ ಕಂಡು ಬಂದಿದೆ.
ಅರಣ್ಯ ಅಧಿಕಾರಿ ಸುಶಾಂತ ನಂದ ಈ ವಿಡಿಯೋವನ್ನ ಹಂಚಿಕೊಂಡಿದ್ದು, ಕಂದು ಬಣ್ಣದ ಹಸು ಮತ್ತು ಹಾವು 17 ಸೆಕೆಂಡ್ಗಳ ವೀಡಿಯೊದಲ್ಲಿ ಒಟ್ಟಿಗೆ ಅಂಟಿಕೊಂಡಿರುವುದು ಮತ್ತು ಪರಸ್ಪರ ಆಟವಾಡುವುದನ್ನು ಕಾಣಬಹುದು. ಅವುಗಳ ನಡುವೆ ಯಾವುದೇ ಭಯ ಅಥವಾ ಹೊಡೆದಾಟದ ಲಕ್ಷಣಗಳು ಕಂಡುಬಂದಿಲ್ಲ. ಹಸು ಮತ್ತು ಹಾವು ಎರಡೂ ಕೂಡಾ ವಿಭಿನ್ನ ನಡವಳಿಕೆ ಹೊಂದಿರುವಂತಹ ಜೀವಿಗಳು. ಆದ್ರೆ ಈ ವಿಡಿಯೋದ ಕೊನೆಯಲ್ಲಿ ಹಸು ಹಾವಿನ ತಲೆಯನ್ನ ತನ್ನ ನಾಲಿಗೆಯಿಂದ ಸವರಿದ ದೃಶ್ಯವೂ ಕಂಡು ಬಂದಿದೆ.
ಈ ವಿಡಿಯೋವನ್ನ ಹಂಚಿಕೊಂಡ ಭಾರತೀಯ ಅರಣ್ಯಾಧಿಕಾರಿ ಸುಶಾಂತ ನಂದ, ಇವೆರಡೂ ಜೀವಿಗಳು ಸ್ವಭಾವ ಮತ್ತು ನಡುವಳಿಕೆ ಬೇರೆಯಾದರೂ ಸಹಿತ ತಮ್ಮದೇ ಆದ ಭಾಷೆಯನ್ನ ಹೊಂದಿದೆ. ಅದು ಮಾನವ ತಿಳುವಳಿಕೆಯನ್ನೂ ಮೀರಿದ ವಿಚಾರವಾಗಿದ್ದು, ಹಾವು ಹಸುವನ್ನ ಕಚ್ಚಿ ಬಿಡಬಹುದಿತ್ತು ಆದರೆ ಹಾಗೆ ಮಾಡದೇ ಸೌಹಾರ್ದತೆಯ ಸಂದೇಶವನ್ನ ರವಾನಿಸಿದೆ ಎಂದು ವಿಡಿಯೋ ಪೋಸ್ಟ್ನಲ್ಲಿ ಬರೆದಿದ್ದಾರೆ. ಕಳೆದ 15 ಗಂಟೆಗಳ ಹಿಂದೆ ಪೋಸ್ಟ್ ಮಾಡಿರುವ ಈ ವಿಡಿಯೋ ಸುಮಾರು 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನ ಗಳಿಸಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನ ಪಡೆದಿದೆ.