

ನವದೆಹಲಿ : ಕರೊನಾ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರುವುದರ ಮೇಲೆ ಹಲವೆಡೆ ವಿಧಿಸಲಾಗಿರುವ ನಿರ್ಬಂಧಗಳ ನಡುವೆ, ಇಂದು ದೇಶಾದ್ಯಂತ ಮುಸಲ್ಮಾನರು ಬಕ್ರೀದ್ ಆಚರಿಸುತ್ತಿದ್ದಾರೆ. ಪರಸ್ಪರ ಭೇಟಿಯಾಗಿ ಶುಭ ಹಾರೈಸುವುದಕ್ಕೆ ಹೆಚ್ಚಿನ ಮಹತ್ವವಿರುವ ಈ ಹಬ್ಬವನ್ನು ಎರಡನೇ ವರ್ಷ ಕೋವಿಡ್ ಕರಿನೆರಳಿನಲ್ಲಿ ಆಚರಿಸಲಾಗುತ್ತಿದೆ.
ಪ್ರೀತಿ ಮತ್ತು ತ್ಯಾಗದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ, ಇಂದು ದೇಶದ ಪ್ರಮುಖ ಮುಸಲ್ಮಾನ ಪ್ರಾರ್ಥನಾ ಸ್ಥಳಗಳಲ್ಲಿ ನಿಯಮಿತ ಮಟ್ಟದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿರುವ ವರದಿಗಳು ಬಂದಿವೆ. ಪಂಜಾಬ್ನ ಅಮೃತಸರದಲ್ಲಿನ ಖೈರುದ್ದೀನ್ ಮಸೀದಿಯಲ್ಲಿ ಇಂದು ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಾವಳಿಯನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ.
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, "ಈದ್ ಮುಬಾರಕ್" ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇತರ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷಗಳ ನಾಯಕರು ಕೂಡ ಬಕ್ರೀದ್ ಆಚರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಶುಭಾಶಯ ಹೇಳಿದ್ದಾರೆ. (ಏಜೆನ್ಸೀಸ್)