

ಲೆಬನಾನ್: ಕಳೆದ ವರ್ಷ ಅಕ್ಟೋಬರ್‌ನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿರುವುದು ಗೊತ್ತೆ ಇದೆ. ಇಸ್ರೇಲಿ ಸೇನೆ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವೆ ಗಡಿಯಾಚೆಗಿನ ಯುದ್ಧ ನಡೆಯುತ್ತಿದೆ. ಇದನ್ನು ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಜಾಗತಿಕವಾಗಿ ಹೇಳಲಾಗುತ್ತಿದೆ. ಅದರ ವಿಡಿಯೋ(Video)ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹಿಜ್ಬುಲ್ಲಾ ಸದಸ್ಯರ ಮೇಲೆ ಕೆಲವು ಅನುಮಾನಾಸ್ಪದ ದಾಳಿಗಳು ನಡೆಯುತ್ತಿವೆ. ಪೇಜರ್‌ಗಳು ಮತ್ತು ವಾಕಿ-ಟಾಕಿಗಳಂತಹ ಸಾಧನಗಳು ಸ್ಫೋಟಗೊಳ್ಳುತ್ತಿವೆ. ದಾಳಿಯ ಹಿಂದೆ ಇಸ್ರೇಲ್ ಇದೆ ಎಂದು ಹಿಜ್ಬುಲ್ಲಾ ಆರೋಪವಾಗಿದೆ. ಆದರೆ ಇಸ್ರೇಲ್ ಇದನ್ನು ನಿರಾಕರಿಸಲಿಲ್ಲ ಹಾಗೆಂದು ಸ್ವೀಕರಿಸಿಯೂ ಇಲ್ಲ.
ಕಳೆದ ಎರಡು ದಿನಗಳಿಂದ ಲೆಬನಾನ್ನಿಂದ ಭಯಾನಕ ಸುದ್ದಿಗಳು ಹೊರಹೊಮ್ಮುತ್ತಿವೆ. ನಿನ್ನೆ ಇಸ್ರೇಲ್, ಹೆಜ್ಬುಲ್ಲಾದ ನೂರಾರು ಸ್ಥಾನಗಳನ್ನು ಗುರಿಯಾಗಿಸಿತ್ತು. ಈ ವೇಳೆ ಪತ್ರಕರ್ತರೊಬ್ಬರ ಮನೆ ಮೇಲೆ ಕ್ಷಿಪಣಿ ದಾಳಿಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಲೈವ್ ಕೊಡಲು ಪ್ರಾರಂಭಿಸುತ್ತಾರೆ. ಈ ಮಧ್ಯೆ ಮನೆಯ ಮೇಲೆ ದಾಳಿ ನಡೆಯುತ್ತದೆ. ಆಗ ಪತ್ರಕರ್ತರು ಕಿರುಚಿ ಹೋಗುವುದು ಕಾಣುತ್ತದೆ. ದಾಳಿಯಿಂದಾಗಿ ಅವರ ಹಿಂದಿದ್ದ ಗೋಡೆ ಬೀಳುವುದನ್ನು ಕಾಣಬಹುದಾಗಿದೆ.
ದೇವರಿಗೆ ಧನ್ಯವಾದಗಳು ಹೇಳುತ್ತೇನೆ ಜತೆಗೆ ಕರೆ ಮಾಡಿ ನನಗೆ ಮೆಸೇಜ್ ಕಳುಹಿಸುವ ಮೂಲಕ ನನ್ನ ಯೋಗಕ್ಷೇಮವನ್ನು ಕೇಳಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ ಎಂದು ದಾಳಿಗೊಳಗಾದ ಪತ್ರಕರ್ತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ಲೆಬನಾನ್ ಮೇಲೆ ಸೆಪ್ಟೆಂಬರ್ 21 ರಂದು ನಡೆಸಿದ ಕ್ಷಿಪಣಿ ದಾಳಿಯು ಇಸ್ರೇಲ್-ಹಮಾಸ್ ಯುದ್ಧದ ಆರಂಭದ ನಂತರದ ಅತಿದೊಡ್ಡ ದಾಳಿ ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 356 ಜನರು ಮೃತಪಟ್ಟಿದ್ದಾರೆ. ಹಾಗೂ 1,246ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.(ಏಜೆನ್ಸೀಸ್)