VIDEO|ಬೇಟೆಯ ನೈಪುಣ್ಯ ಕರಗತ ಮಾಡಿಕೊಳ್ಳುತ್ತಿರುವ ಮರಿ ಚಿರತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್​

cubes feb 25 2020
Published on

ನವದೆಹಲಿ: ಎರಡು ಮರಿ ಚಿರತೆಗಳು ಬೇಟೆಯ ನೈಪುಣ್ಯ ಕರಗತ ಮಾಡಿಕೊಳ್ಳುತ್ತಿರುವ ವಿಡಿಯೋ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್​ ಆಗಿದೆ.

ಎರಡು ಮರಿ ಚಿರತೆಗಳು ಬೇಟೆಯಾಡುವುದನ್ನು ಕಲಿಯುತ್ತಿರುವ 13 ಸೆಕೆಂಡುಗಳ ವಿಡಿಯೋ ದೃಶ್ಯ ಅಪ್​ಲೋಡ್​ ಆಗಿದ್ದು ಅದನ್ನು ವೀಕ್ಷಿಸಿದವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿ ಸುಸಂತಾ ನಂದಾ ಎಂಬುವವರ ಖಾತೆಯಿಂದ ಈ ವಿಡಿಯೋ ಹಂಚಿಕೆಯಾಗಿದೆ.
ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ 2 ಸಾವಿರಕ್ಕೂ ಅಧಿಕವಾಗಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಅದ್ಭುತ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಚಿರತೆ ಬೇಟೆ ಕರಗತ ಮಾಡಿಕೊಳ್ಳುವುದು ಅಪರೂದ ದೃಶ್ಯ. ಇದನ್ನು ಅರಣ್ಯ ಅಧಿಕಾರಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಮರಿ ಚಿರತೆಗಳು ಹೇಗೆ ಬೇಟೆಯ ಕೌಶಲವನ್ನು ಕಲಿಯುತ್ತವೆ ಎಂಬುದನ್ನು ಈ ದೃಶ್ಯ ತೋರಿಸುತ್ತದೆ. ಚಿರತೆಗಳು ಬದುಕಲು ಭೇಟೆ ಅನಿವಾರ್ಯ ಹೀಗಾಗಿ ಅವರು ಸಹಜವಾಗಿ ಭೇಟೆ ಕಲಿಯುತ್ತವೆ. ವಯಸ್ಕ ಚಿರತೆಗಳನ್ನು ನೋಡಿ ಭೇಟೆಯನ್ನು ಕಲಿಯುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net