VIDEO: ಹತ್ತು ಮಕ್ಕಳ ತಾಯಿಯಾಗು, ಹನ್ನೊಂದನೆಯ ಮಗು ನಿನ್ನ ಪತಿಯಾಗಲಿ!

911750
Published on

ಶರಣಾಗತಿ ಅಂದಾಗ ಅಲ್ಲಿ ಸೋಲಿನ ಭಾವ ಇರುತ್ತದೆ. ಸಮರ್ಪಣೆಯಲ್ಲಿ ಸೋಲಿನ ಭಾವ ಇರುವುದಿಲ್ಲ. ಅದು ಗೆಲುವು. ಸಮರ್ಪಣೆ ಎನ್ನುವಂತದ್ದು ಎಲ್ಲವೂ ಇದ್ದಾಗ ಬರುವ ಭಾವನೆ. ಏನೂ ಇಲ್ಲದ ಸಂದರ್ಭದಲ್ಲಿ ಬರುವುದು ಶರಣಾಗತಿ. ಎಲ್ಲವೂ ಇದ್ದಾಗ ಇದು ಸಾಕು ಅನ್ನಿಸಿ ಹೋಗುವುದು ಇದೆಯಲ್ಲ ಅದು ಸಮರ್ಪಣೆ.

ಅಂಥದ್ದೊಂದು ಸಮರ್ಪಣಾ ಭಾವದಲ್ಲಿ ಸ್ತ್ರೀ ಒಂದು ಪ್ರಕೃತಿಯ ಭಾಗವಾಗಿ ಆ ಗಂಡನ್ನು ಸೇರಿಸುವುದಕ್ಕೆ ಇದ್ದಾಳೆ. ಅದಕ್ಕೇನೆ ಹಿಂದಿನ ಕಾಲದಲ್ಲಿ ಋಷಿಗಳೆಲ್ಲ ಯಾರಾದರೂ ವಿವಾಹಿತ ಹೆಣ್ಮಗಳು ನಮಸ್ಕರಿಸಿದರೆ ಅವರು ಋಷಿಗಳು ಏನು ಆಶೀರ್ವಾದ ಮಾಡುತ್ತಿದ್ದರು ಅಂತ ಅಂದರೆ ಹತ್ತು ಮಕ್ಕಳ ತಾಯಿಯಾಗು, ಹನ್ನೊಂದನೆಯ ಮಗು ನಿನ್ನ ಪತಿಯಾಗಲಿ ಅಂತ. ಯಾಕೆ ಈ ರೀತಿ ಆಶೀರ್ವಾದ ಮಾಡ್ತಾ ಇದ್ರು ಅನ್ನೋದನ್ನು ಆಧ್ಯಾತ್ಮ ಚಿಂತಕಿ ವೀನಾ ಬನ್ನಂಜೆ ವಿವರಿಸಿದ್ದು, ಮೇಲಿನ ವಿಡಿಯೋದಲ್ಲಿ ಪೂರ್ಣ ಪಾಠ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net