ಹುಣಸೂರು: ತಾಲೂಕಿನ ಗೆರಸನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬೆಂಬಲಿಗರು ಗೆಲುವು ಸಾಧಿಸಿದರು.
5 ವರ್ಷಗಳ ಆಡಳಿತಾವಧಿಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದರು. ಜೆಡಿಎಸ್ ಬೆಂಬಲಿತರಾಗಿ ಮಂಜುನಾಥ್, ರೇವಣ್ಣ, ಜಗದೀಶ್, ಸಿದ್ದಲಿಂಗನಾಯಕ, ಯೋಗೇಂದ್ರ ಶೆಟ್ಟಿ, ಪ್ರೇಮಾ ಚಂದ್ರಕುಮಾರ, ದೇವರಾಜೇಗೌಡ, ಪುಟ್ಟ ಲಕ್ಷ್ಮಮ್ಮ, ಗೋವಿಂದ, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪುಟ್ಟರಾಜೇಗೌಡ ಮತ್ತು ರಾಮಚಂದ್ರ ಗೆಲುವು ಸಾಧಿಸಿದ್ದಾರೆ. ವಿಜೇತರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಅಭಿನಂದನೆ ಸಲ್ಲಿಸಿದರು. ಕೆಎಂಎಫ್ ನಿರ್ದೇಶಕ ಕೆ.ಎಸ್.ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಮುಖಂಡರಾದ ಮಲ್ಲೇಶ್ ವೆಂಕಟೇಶ್, ದೇವರಾಜ್, ಸ್ವಾಮಿಗೌಡ ಇತರರು ಇದ್ದರು.
ಹುಣಸೂರು ತಾಲೂಕು ಗೆರಸನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಕೆ.ಎಸ್.ಕುಮಾರ್ ಇತರ ನಿರ್ದೇಶಕರು ಇದ್ದರು.