

Amit Shah: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ನಿವೃತ್ತ ನ್ಯಾ. ಸುದರ್ಶನ್ ರೆಡ್ಡಿಯವರು ನಕ್ಸಲಿಸಂ ಅನ್ನು ಬೆಂಬಲಿಸಿ ಸಹಾಯ ಮಾಡಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ(ಆಗಸ್ಟ್ 22) ಆರೋಪ ಮಾಡಿದ್ದಾರೆ.
2011ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ, ಇಂದು ಉಪರಾಷ್ಟ್ರಪತಿಯಾಗಿರುವ ನ್ಯಾ.ಸುದರ್ಶನ್ ರೆಡ್ಡಿಯವರುಮ, ನಕ್ಸಸಲಿಂ ವಿರುದ್ಧದ ಹೋರಾಟದಲ್ಲಿ ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸುವ ಸಾಲ್ವಾ ಜುಡಮ್ ಎಂಬ ಪಡೆಯ ವಿರುದ್ಧ ತೀರ್ಪು ನೀಡಿ, ಅದು ಕಾನೂನು ಬಾಹಿರ ತಕ್ಷಣ ಅದನ್ನು ನಿಶಷ್ತ್ರೀಕರಣಗೊಳಿಸಬೇಕೆಂದು ಆದೇಶ ನೀಡಿದ್ದರು.
ಈ ಕುರಿತು ಕೇರಳದ ಮನೋರಾಮ ಚಾನಲ್ನ ಕಾನ್ಕ್ಲೇವ್ನಲ್ಲಿ ಮಾತನಾಡಿರುವ ಶಾ, ನ್ಯಾ. ಸುದರ್ಶನ್ ರೆಡ್ಡಿ ಸಾಲ್ವಾ ಜುಡುಮ್ ನಿಷೇಧದ ತೀರ್ಪು ನೀಡದಿದ್ದರೆ, ದೇಶದಲ್ಲಿ ತೀವ್ರವಾದಿ ನಕ್ಸಲಿಸಂ ಚಳುವಳಿ 2020ಕ್ಕಿಂತ ಮೊದಲು ಕೊನೆಗೊಳ್ಳುತ್ತಿತ್ತು. ಅವರನ್ನು ಆಯ್ಕೆ ಮಾಡಿರುವುದರಿಂದ ಕೇರಳದಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳು ಮತ್ತಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಕೇರಳವು ನಕ್ಸಲಿಸಂನ ಹೊಡೆತವನ್ನು ಎದುರಿಸಿದೆ. ಎಡ ಪಕ್ಷಗಳ ಒತ್ತಡದಲ್ಲಿ ಕಾಂಗ್ರೆಸ್ ಪಕ್ಷವು ನಕ್ಸಲಿಸಂ ಅನ್ನು ಬೆಂಬಲಿಸುವ ಮತ್ತು ಸುಪ್ರೀಂ ಕೋರ್ಟ್‌ನಂತಹ ಧಾರ್ಮಿಕ ವೇದಿಕೆಯನ್ನು ಬಳಸಿದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದನ್ನು ಕೇರಳದ ಜನರು ಖಂಡಿತವಾಗಿಯೂ ನೋಡುತ್ತಾರೆ ಎಂದು ತಿಳಿಸಿದರು.
ಆಡಳಿತಾರೂಢ ಎನ್‌ಡಿಎ ಪಕ್ಷವು ಆರೆಸ್ಸೆಸ್ ಹಿನ್ನೆಲೆಯುಳ್ಳ ತಮಿಳುನಾಡಿನ ಬಿಜೆಪಿ ನಾಯಕ, ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. (ಏಜೆನ್ಸೀಸ್)