

ಚಿತ್ರದುರ್ಗ: ನಗರದಲ್ಲಿ ಹಿಂದು ಮಹಾ ಗಣಪತಿ ಶೋಭಾಯಾತ್ರೆ ಸೆ.17ರಂದು ನಡೆಯಲಿದೆ. ಗಣಪತಿ ವಿಸರ್ಜನಾ ಮೆರವಣಿಗೆ ನಗರದ ಬಿಡಿ ರಸ್ತೆಯಲ್ಲಿ ಸಂಚರಿಸಿ,ಹೊಳಲ್ಕೆರೆ ರಸ್ತೆಯ ಮೂಲಕ ಚಂದ್ರವಳ್ಳಿಯ ವಿಸರ್ಜನಾ ಸ್ಥಳ ತಲುಪಲಿದೆ. ಮೆರವಣಿಗೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾ ಗವಹಿಸುವುದರಿಂದಾಗಿ ನಗರ ಪ್ರವೇಶಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸ ಬೇಕೆಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ.
ಬದಲಿ ಮಾರ್ಗ
ಬೆಂಗಳೂರು ಹಾಗೂ ಚಳ್ಳಕೆರೆ ಮತ್ತು ಹೊಸಪೇಟೆ ಮಾರ್ಗದಿಂದ ಬರುವ ವಾಹನಗಳು ರಾಹೆ 4ರ ಬೈಪಾಸ್ ರಸ್ತೆ ಮುಖಾಂತರ ಮೆದೇಹಳ್ಳಿ ರಸ್ತೆ ಮತ್ತು ಎಪಿಎಂಸಿ ಮಾರುಕಟ್ಟೆ ಮುಖಾಂತರ ಬಸ್ ನಿಲ್ದಾಣಗಳಿಗೆ ಬಂದು ಪುನಃ ಅದೇ ಮಾರ್ಗದಲ್ಲಿ ಹೊರಹೋಗುವುದು. ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಜೆಎಂಐಟಿ ವೃತ್ತದ ಮುಖಾಂತರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು.
ಶಿವಮೊಗ್ಗ,ಹೊಳಲ್ಕೆರೆ,ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ರಾಹೆ 13ರ ಬೈಪಾಸ್‌ನಲ್ಲಿ ಮುರುಘಾ ಮಠ-ಅಲ್ಲಿಂದ ರಾಹೆ 4ರ ಬೈಪಾಸ್ ರಸ್ತೆ ಮುಖಾಂತರ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಗೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸ ಬೇಕೆಂದು ಡಿಸಿ ತಿಳಿಸಿದ್ದಾರೆ.
ವಾಹನಗಳ ನಿಲುಗಡೆ
ಮೆರವಣಿಗೆಯಲ್ಲಿ ಭಾಗವಹಿಸುವವರು ಚಳ್ಳಕೆರೆ ಮೂಲಕ ಮುರುಘಾರಾಜೇಂದ್ರ ಕ್ರೀಡಾಂಗಣ,ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.
----