ಬಾಗಲಕೋಟೆ | ಸಾಲದ ಹಣ ಹಿಂತಿರುಗಿಸದೆ ಸತಾಯಿಸಿದ ಸ್ನೇಹಿತರು; ಮನನೊಂದು ವಿಷ ಸೇವಿಸಿದ ಪಶುವೈದ್ಯ

Sucide
Published on

ಬಾಗಲಕೋಟೆ: ಸ್ನೇಹಿತರಿಗೆ ನೀಡಿದ ಸಾಲದ ಹಣ ಮರುಪಾವತಿಯಾಗಿಲ್ಲವೆಂದು ಮನನೊಂದ ಪಶುವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದ ನಿವಾಸಿ ನಂದೆಪ್ಪ ಬಾಗೇವಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪಶುವೈದ್ಯ.

ತನ್ನ ಸಹೋದ್ಯೋಗಿ ವೈದ್ಯರೊಬ್ಬರಿಗೆ ನಂದೆಪ್ಪ 5 ಲಕ್ಷ ರೂಪಾಯಿ ಸಾಲ ನೀಡಿದ್ದರು. ಜತೆಗೆ ಸ್ನೇಹಿತರೊಬ್ಬರಿಗೆ ಹಣ ಹೊಂದಿಸಿ 7 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು. ಆದರೆ ಸಾಲ ಪಡೆದುಕೊಂಡ ಇಬ್ಬರು ಎಷ್ಟೇ ಸಮಯವಾದರೂ ಹಣ ಹಿಂತಿರುಗಿಸಿಲ್ಲ.

ಸಾಲದ ಹಣ ಹಿಂತಿರುಗಿ ಕೈ ಸೇರಿಲ್ಲವೆಂದು ಮನನೊಂದ ವೈದ್ಯ ನಂದೆಪ್ಪ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್​ನೋಟ್​ನಲ್ಲಿ ಸಾಲ ಕೊಟ್ಟವರ ವಿವರ ಬರೆದಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net