ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್​ ನಿಧನ

Kishori Ballal 18 Feb 20
Published on

ಬೆಂಗಳೂರು: ಹಿರಿಯ ನಟಿ ಕಿಶೋರಿ ಬಲ್ಲಾಳ್​ ಇಂದು ನಿಧನರಾದರು. ಇತ್ತೀಚೆಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವರಿಗೆ ವಯೋಸಜಯ ಕಾಯಿಲೆಗಳೂ ಇದ್ದವು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.

ಆಸ್ಪತ್ರೆಗೆ ದಾಖಲಾಗಿದ್ದ ಕಿಶೋರಿ ಬಲ್ಲಾಳ್​, ಇಂದು ಶೇಖರ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

70ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕಿಶೋರಿ ಬಲ್ಲಾಳ್ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಶಾರುಖ್​ಖಾನ್​ ಅಭಿನಯದ ಹಿಂದಿ ಚಿತ್ರದ ಸ್ವದೇಸ್​ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

'ಕಹಿ' ಕಿಶೋರಿ ಬಲ್ಲಾಳ್​ ಅವರ ಕೊನೇ ಸಿನಿಮಾ. 1960ರಲ್ಲಿ ಸಿನಿಮಾ ಲೋಕ ಪ್ರವೇಶಿಸಿದ ಅವರು ಸುಮಾರು 15 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net