ಜಾತಿ ಗಣತಿ ವರದಿ ಪರಿಶೀಲಿಸಿ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

K.JAYAPRAKASH HEGDE
Published on

ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ವರದಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು. ವರದಿ ಕೊಡಲು ಕಾಲಮಿತಿ ಎನ್ನುವುದು ಇಲ್ಲ. ನಾವು ವರದಿ ಕೊಡಬೇಕಾಗುತ್ತದೆ. ಇರುವ ಮುಖ್ಯಾಂಶಗಳನ್ನೆಲ್ಲ ನಾವು ಕೊಡುತ್ತೇವೆ. ಮುಂದೆ ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ.

ವರದಿಯಲ್ಲಿ ಏನು ಬರೆಯಲಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. ನಾನು ವರದಿ ಓದುತ್ತಿದ್ದೇನೆ. ಎಲ್ಲ ಪರಿಶೀಲಿಸಿದ ಮೇಲೆ ಸಲ್ಲಿಕೆ ಮಾಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪಂಚಮಸಾಲಿ ಮೀಸಲಾತಿ ಗೊಂದಲ ವಿಚಾರ ಕುರಿತ ಪ್ರಶ್ನೆಗೆ, ಸಿಎಂ ಹೇಳಿದ್ದಾರೆ ಎಂದು ನಾವು ಮೀಸಲಾತಿಗೆ ಶಿಾರಸು ಮಾಡಲು ಬರುವುದಿಲ್ಲ. ನಿಯಮಗಳಲ್ಲಿ ಏನಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಅದನ್ನು ನೋಡಿಯೇ ವರದಿ ಕೊಡಬೇಕಾಗುತ್ತದೆ. ನಿಯಮಮೀರಿ ವರದಿ ಕೊಡಲು ಬರುವುದಿಲ್ಲ ಎಂದರು.

ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತ ಮತ್ತೊಂದು ಪ್ರಶ್ನೆಗೆ, ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದೇನೆ. ಹಾಗಾಗಿ ರಾಜಕೀಯ ವಿಚಾರ ಮಾತನಾಡುವುದಿಲ್ಲ. ನವೆಂಬರ್ ವರೆಗೆ ನನ್ನ ಅಧಿಕಾರಾವಧಿ ಇದೆ. ನಾನು ಮಾತನಾಡಿದರೆ ವರದಿ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ನಾನು ರಾಜಕೀಯ ಮಾತನಾಡುವುದಿಲ್ಲ ಎಂದರು. ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕ ಮಾಡಿದ್ದಾರೆಯೆ ಎಂಬ ಪ್ರಶ್ನೆಗೆ, ನಾನು ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ ಎಂದು ಜಯಪ್ರಕಾಶ ಹೆಗ್ಡೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net