ಈ ವರ್ಷ ಇವರಿಗೆಲ್ಲ ಕಾದಿದೆ ಕಂಟಕ! ಸೆಲೆಬ್ರಿಟಿಗಳಿಗೆ ಜೈಲುವಾಸ ಸಂಕಷ್ಟ: ವೇಣುಸ್ವಾಮಿ ಸ್ಫೋಟಕ ಭವಿಷ್ಯ | Venuswamy

ವಿಜಯವಾಣಿ - 2025-03-29T172501.400
Published on

Venuswamy​: ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತ. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ವೇಣು ಸ್ವಾಮಿ ಖ್ಯಾತಿಯನ್ನು ಗಳಿಸಿದ್ದಾರೆ. ಆರಂಭದಲ್ಲಿ ಈತ ಹೇಳುವ ಭವಿಷ್ಯವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ನುಡಿದ ಭವಿಷ್ಯವನ್ನು ಬಹುತೇಕರು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿರುವ ವೇಣುಸ್ವಾಮಿ, ಈ ಬಾರಿ ಮತ್ತೊಂದು ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ.

ಕಳೆದ ಬಾರಿ ನಾಗಚೈತನ್ಯ ಮತ್ತು ಶೋಭಿತಾ ದಾಂಪತ್ಯ ಕುರಿತು ಭವಿಷ್ಯ ನುಡಿದಿದ್ದ ವೇಣುಸ್ವಾಮಿ, ಚಿತ್ರರಂಗದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಯುಗಾದಿ ಹಬ್ಬದ ಹಿನ್ನೆಲೆ ಟಾಲಿವುಡ್​ ಚಿತ್ರರಂಗ ಮತ್ತು ಕೆಲವು ರಾಜಕಾರಣಿಗಳಿಗೆ ಜೈಲುವಾಸ ಅನುಭವ ಎದುರಾಗಲಿದೆ ಎಂಬ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

"ಈ ವಿಶ್ವವಾಸು ನಾಮ ವರ್ಷದಲ್ಲಿ ಒಂದಷ್ಟು ಸೆಲೆಬ್ರಿಟಿಗಳು ಜೈಲಿಗೆ ಹೋಗುವ ಅಪಾಯದಲ್ಲಿದ್ದಾರೆ. ಇಲ್ಲಿ ಸೆಲೆಬ್ರಿಟಿಗಳು ಅಂದರೆ ಕೇವಲ ಚಲನಚಿತ್ರೋದ್ಯಮದವರು ಮಾತ್ರವಲ್ಲ. ರಾಜಕೀಯ ವ್ಯಕ್ತಿಗಳು ಕೂಡ ಸೇರಿಕೊಳ್ಳುತ್ತಾರೆ. ವ್ಯವಹಾರದಿಂದ ಚಲನಚಿತ್ರೋದ್ಯಮದವರೆಗೂ ಹಾಗೂ ಇತರೆ ಎಲ್ಲಾ ಹಂತದ ವಿವಿಐಪಿಗಳು ಈ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯಿದೆ. ಸೆಲೆಬ್ರಿಟಿಗಳು ಖಂಡಿತವಾಗಿಯೂ ಕೆಲವು ರೀತಿಯ ಸಮಸ್ಯೆಯನ್ನು ಎದುರಿಸಲಿದ್ದಾರೆ" ಎಂದು ವೇಣು ಭವಿಷ್ಯ ನುಡಿದಿದ್ದಾರೆ.

"ಇವರು ಸಮಾಜದಲ್ಲಿ ಕುಖ್ಯಾತಿ, ಕಾನೂನು ತೊಂದರೆಗಳು ಮತ್ತು ಜೈಲಿಗೆ ಹೋಗುವ ಅಪಾಯವನ್ನು ಎದುರಿಸಬಹುದು. ಟಾಲಿವುಡ್​ ಮೀನ ರಾಶಿಗೆ ಸಂಬಂಧಿಸಿದೆ. ತೆಲುಗು ರಾಜಕೀಯವು ತುಲಾ ರಾಶಿಗೆ ಸಂಬಂಧಿಸಿದೆ. ತುಲಾ ರಾಶಿಯನ್ನು ತೆಗೆದುಕೊಂಡರೆ, ಆರನೇ ಮನೆಯಾದ ಮೀನ ರಾಶಿಯಲ್ಲಿ ಆರು ಗ್ರಹಗಳ ನಕ್ಷತ್ರಪುಂಜವು ರೂಪುಗೊಳ್ಳುತ್ತದೆ. ಮೀನ ರಾಶಿಯನ್ನು ತೆಗೆದುಕೊಂಡರೆ, ಮೀನ ರಾಶಿಯಲ್ಲಿ ಆರು ಗ್ರಹಗಳ ನಕ್ಷತ್ರಪುಂಜವು ರೂಪುಗೊಳ್ಳುತ್ತದೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net