ವಿಜಯ್​-ರಶ್ಮಿಕಾ ಜೋಡಿ... ಕಡೆಗೂ ನಿಜವಾಯ್ತು ವೇಣುಸ್ವಾಮಿ ನುಡಿದ ಭವಿಷ್ಯ! ಆದ್ರೆ, ಅದೊಂದು ವಿಚಾರ | Venuswamy ​Astrology

ವಿಜಯವಾಣಿ (18)
Published on

Venuswamy ​Astrology: ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತ. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ವೇಣುಸ್ವಾಮಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರು. ಆಗ ವೇಣು ಭವಿಷ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೆಲವರು ಆರಂಭಿಸಿದರು. ಈ ಮಧ್ಯೆ, ಮತ್ತೊಂದು ಶಾಕಿಂಗ್ ವಿಚಾರ ಏನಂದರೆ, ರಶ್ಮಿಕಾ ವಿಷಯದಲ್ಲಿ ವೇಣು ನುಡಿದಿದ್ದ ಭವಿಷ್ಯ ಕಡೆಗೂ ನಿಜವಾಗಿದೆ.

ಕಳೆದ ಕೆಲವು ವರ್ಷಗಳಿಂದ ಟಾಲಿವುಡ್​ ಸ್ಟಾರ್​ ಹೀರೋ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ಲವ್ವಿಡವ್ವಿ ನಡೆಯುತ್ತಿದೆ. ಅವರಿಬ್ಬರು ಪರಸ್ಪರ ಇಷ್ಟಪಡುತ್ತಿದ್ದಾರೆ ಎಂಬ ವದಂತಿಗಳು ಬಹಳ ಬಲವಾಗಿ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಅವರಿಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ಬಲ ನೀಡುತ್ತಿತ್ತು. ಆದರೆ, ಯಾವುದೇ ರೀತಿಯಲ್ಲೂ ಇದು ದೃಢವಾಗಿರಲಿಲ್ಲ. ಆದರೀಗ, ಸ್ಟಾರ್ ಜೋಡಿಗಳು ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದು ಖಚಿತವಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಯೂಟ್ಯೂಬ್ ಸಂದರ್ಶನಗಳಲ್ಲಿ, ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಆಗುತ್ತಾರೆ ಎಂದು ವೇಣು ಹೇಳಿದ್ದರು. ಅಂತೆಯೇ, ಅವರು ನುಡಿದ ಭವಿಷ್ಯ ಇಂದು ನಿಜವಾಗಿದ್ದು, ಟಾಲಿವುಡ್​ ಮಂದಿಯ ಹುಬ್ಬೇರಿಸಿದೆ. ಮತ್ತೊಂದೆಡೆ, ಶೀಘ್ರವೇ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವ ನವಜೋಡಿಗೆ ಅಭಿಮಾನಿಗಳು ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅಂದು ವೇಣುಸ್ವಾಮಿ ನುಡಿದ ಭವಿಷ್ಯವೇನು?

"ಎಲ್ಲರಿಗೂ ತಿಳಿದಿರುವಂತೆ ಅವರಿಬ್ಬರು ಮದುವೆ ಆಗುತ್ತಾರೆ. ಹಾಗೆಯೇ, ದೂರವೂ ಆಗ್ತಾರೆ. ಅದೇನೇ ಇರಲಿ, ಇದು ನಾನು ಈಗ ಹೇಳಿದ್ದಲ್ಲ. ಬಹಳ ಹಿಂದೆಯೇ ಹೇಳಿದ್ದೆ. ಈ ಬಗ್ಗೆ ಸ್ವತಃ ರಶ್ಮಿಕಾಗೆ ನಾನು ಹೇಳಿದ್ದೆ. ಅದಾದ ಬಳಿಕ ನನ್ನ ಮತ್ತು ಅವರ ನಡುವೆ ಒಂದು ಸಣ್ಣ ಭಿನ್ನಾಭಿಪ್ರಾಯ ಮೂಡಿತು ಎಂದು ವಿಡಿಯೋದಲ್ಲಿ ವೇಣು ಹೇಳಿದ್ದಾರೆ. ಅಂದು ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವರದಿಗಳ ಪ್ರಕಾರ, ತಮ್ಮ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ವಿಜಯ್ ಅಥವಾ ರಶ್ಮಿಕಾ ಯಾವುದೇ ರೀತಿಯಲ್ಲೂ ಸ್ಪಷ್ಟಪಡಿಸಿಲ್ಲ ಎಂಬುದು ಗಮನಾರ್ಹ.

ಸ್ಫೋಟಕ ಭವಿಷ್ಯದಿಂದಲೇ ವಿವಾದಕ್ಕೆ ಗುರಿ

ಕಳೆದ ವರ್ಷದ ಆಗಸ್ಟ್​ ತಿಂಗಳಲ್ಲಿ ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಎಂಗೇಜ್​ಮೆಂಟ್​ ಬಹಳ ಸರಳವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು. ಇದು ನಟನ ಎರಡನೇ ವಿವಾಹವಾಗಿದ್ದು, ಈ ಹಿಂದೆ ನಟಿ ಸಮಂತಾ ಅವರಿಗೆ ವಿಚ್ಛೇದನ ಕೊಡುವ ಮೂಲಕ ತಮ್ಮ ಮೊದಲನೇ ಮದುವೆಗೆ ಗುಡ್​ಬೈ ಹೇಳಿದರು. ಶೋಭಿತಾ ಜತೆ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದ ‘ಚೈ’ ಹೊಸ ದಾಂಪತ್ಯ ಜೀವನ ಆರಂಭಕ್ಕೂ ಮುನ್ನವೇ ಸ್ಫೋಟಕ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ, ನಿಮ್ಮಿಬ್ಬರ ಸಂಬಂಧವು ಒಂದು ಹೆಣ್ಣಿನ ವಿಷಯಕ್ಕಾಗಿಯೇ 2027ರಲ್ಲಿ ಮುರಿದುಬೀಳಲಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು. ಈ ವಿಷಯ ಅಂದು ಟಾಲಿವುಡ್​ನಲ್ಲಿ ದೊಡ್ಡ ವಿವಾದಕ್ಕೆ ತಿರುಗಿ, ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net