ಬಿನ್ನಿಮಿಲ್ ಟ್ಯಾಂಕ್‌ಬಾಂಡ್ ರಸ್ತೆಯಲ್ಲಿ ಆರ್‌ಸಿಸಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ; ವಾಹನ ಸಂಚಾರ ಮಾರ್ಗ ಮಾರ್ಪಾಡು

traffic
Published on

ಬೆಂಗಳೂರು: ಬಿನ್ನಿಮಿಲ್ ಟ್ಯಾಂಕ್‌ಬಂಡ್ ರಸ್ತೆಯಲ್ಲಿ ಆರ್‌ಸಿಸಿ ಸೇತುವೆ ಪುನರ್ ನಿರ್ಮಾಣದ ಕಾಮಗಾರಿ ನಿಮಿತ್ತ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಸಂಚಾರ ಪೊಲೀಸರು ಬದಲಿ ಮಾರ್ಗ ಕಲ್ಪಿಸಿದ್ದಾರೆ.

ಬಿನ್ನಿಮಿಲ್ ಜಂಕ್ಷನ್‌ನಿಂದ ಸಿರಸಿ ಜಂಕ್ಷನ್ ಕಡೆಗೆ ಸಾಗುವ ವಾಹನಗಳು ಬಿನ್ನಿಮಿಲ್ ಜಂಕ್ಷನ್ ಎಡ ತಿರುವು ಪಡೆದು ರಾಯನ್ ರಸ್ತೆ ಜಂಕ್ಷನ್ ಸಾಗಿ ಮಿಲ್ ರಸ್ತೆಯಲ್ಲಿ ಬಲ ತಿರುವು ಪಡೆದು ಕಾಟನ್‌ಪೇಟೆ ಮುಖ್ಯ ರಸ್ತೆಯಿಂದ ಬ್ರಿಯಾಂಡ್ ಜಂಕ್ಷನ್ ಬಲತಿರುವು ಪಡೆದು ಮೈಸೂರು ರಸ್ತೆ ಮುಖಾಂತರ ಸಿರಸಿ ವೃತ್ತಕ್ಕೆ ಸಾಗ ಬಹುದು.

ಬಿಎಂಟಿಸಿ ಬಸ್‌ಗಳು ಬಿನ್ನಿಮಿಲ್ ಜಂಕ್ಷನ್‌ನಿಂದ ರಾಯನ್ ರಸ್ತೆ ಜಂಕ್ಷನ್ ತಲುಪಿ ಎಡ ತಿರುವು ಪಡೆದು ಗೂಡ್ಸ್ ಶೇಡ್ ರಸ್ತೆ, ಶಾಂತಲಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿ ಬ್ರಿಯಾಂಡ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಮೈಸೂರು ರಸ್ತೆಗೆ ಸಂಚರಿಸಬಹುದು.

ಇನ್ನೂ ಸಿಟಿ ಮಾರ್ಕೆಟ್ ಕಡೆಯಿಂದ ಬಿನ್ನಿಮಿಲ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಮೈಸೂರು ರಸ್ತೆ ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಾಯನ್ ರಸ್ತೆಯಲ್ಲಿ ಸಾಗಿ ಬೇಲಿಮಠ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮುಖಾಂತರ ಮುಂದೆ ಸಾಗಲು ಮಾರ್ಗ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net