ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ವಾಹನಗಳ ನಡುವೆ ಅಪಘಾತ; ಏಳು ಮಂದಿ ದುರ್ಮರಣ, 20ಜನರಿಗೆ ಗಾಯ

Gujarat 2mrcgh 20
Published on

ಗುಜರಾತ್​: ತಾಪಿ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿ, ಸುಮಾರು 20 ಜನರು ಗಾಯಗೊಂಡಿದ್ದಾರೆ.

ಪೋಖ್ರಾನ್​ ಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಜರಾತ್​ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್​ ಮೊದಲು ಟ್ಯಾಂಕರ್​ಗೆ ಡಿಕ್ಕಿ ಹೊಡೆದು, ಬಳಿಕ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ಎಸ್​ಟಿ ಬಸ್ಸು ಸೂರತ್​ನಿಂದ ತಾಪಿ ಜಿಲ್ಲೆಯ ಉಕಾಯ್​ ಮಾರ್ಗದಲ್ಲಿ ಬರುತ್ತಿತ್ತು. ಮೂರು ವಾಹನಗಳಡಿ ಸಿಲುಕಿದ್ದವರಲ್ಲಿ ಸುಮಾರು 20 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net