ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಇನ್ಮುಂದೆ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ

212
Published on

ಬೆಂಗಳೂರು: ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಬೇಗನ ವಾಹನ ಮಾಲೀಕರ ಪಾಲಾಗುತ್ತಿರಲಿಲ್ಲ. ಮಾಲೀಕರು ಮತ್ತೆ ತಮ್ಮ ವಾಹನಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ ಇನ್ನು ಮುಂದೆ ಆಕ್ಸಿಡೆಂಟ್ ಕೇಸ್ ಇರುವ ವಾಹನ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆದುಕೊಳ್ಳಬಹುದು.

ಹೌದು, ಆಕ್ಸಿಡೆಂಟ್ ಕೇಸ್ ವಾಹನ ಮಾಲೀಕರಿಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿಕೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲೆ ಸ್ಟೇಷನ್​ ವಠಾರದಲ್ಲೇ ಇರುತ್ತಿದ್ದವು. ಆದರೆ ಇನ್ನು ಮುಂದೆ ಆ್ಯಕ್ಸಿಡೆಂಟ್ ಆದ 24ಗಂಟೇಲೆ ವಾಪಸ್ ನೀಡುವಂತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶ ನೀಡಿದ್ದಾರೆ.

ಆ್ಯಕ್ಸಿಡೆಂಟ್ ಆದ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಆರ್​ಟಿಓ ದಿಂದ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಲಾಗುತ್ತದೆ. ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡಲಾಗುತ್ತದೆ. ಆ್ಯಕ್ಸಿಡೆಂಟ್ ಆಗಿದೆ ಅಂತಾ ವಾಹನಗಳನ್ನು ಸ್ಟೇಷನ್ ಮುಂದೆ ಇಟ್ಟುಕೊಂಡರೆ ಸಾಕಷ್ಟು ವಾಹನ ಬಂದು ಬೀಳುತ್ತವೆ. ಇದರಿಂದ ಸ್ಟೇಷನ್ ಕೂಡ ಲಕ್ಷಣವಾಗಿ ಕಾಣಿಸುವುದಿಲ್ಲ. ಹೀಗಾಗಿ ಆ್ಯಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ. ಇನ್ನು ಮುಂದೆ 24 ಗಂಟೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net