ಕ್ಲೋರಿನ್ ಅನಿಲ ಸೋರಿಕೆ; 600 ಕ್ಕೂ ಹೆಚ್ಚು ಯಾತ್ರಿಕರು ಆಸ್ಪತ್ರೆಗೆ ದಾಖಲು| iraq

iraq
Published on

iraq : ಇರಾಕ್‌ನಲ್ಲಿ ನೀರಿನ ಸಂಸ್ಕರಣಾ ಕೇಂದ್ರದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾದ ಪರಿಣಾಮ 600 ಕ್ಕೂ ಹೆಚ್ಚು ಯಾತ್ರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಇಂದು (ಆ.10) ಮಾಹಿತಿ ನೀಡಿದ್ದಾರೆ.

ಸುನ್ನಿ ಸಮುದಾಯಕ್ಕೆ ಸೇರಿದ ನಜಾಫ್ ಹಾಗೂ ಕರ್ಬಾಲಾ ಎಂಬ ಪ್ರಸಿದ್ಧ ಯಾತ್ರಾ ಸ್ಥಳಗಳ ನಡುವೆ ಇರುವ ಸಣ್ಣ ಪಟ್ಟಣವೊಂದರ ಸಮೀಪದ ನೀರಿನ ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಇದನ್ನು ಸಾವಿರಾರು ಮಂದಿ ಸೇವಿಸಿದ್ದಾರೆ. ಆ ಪೈಕಿ ಸುಮಾರು 600 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಕರ್ಬಾಲಾದಲ್ಲಿ ಕ್ಲೋರಿನ್ ಅನಿಲ ಸೋರಿಕೆಯ ಪರಿಣಾಮ 621 ಉಸಿರುಕಟ್ಟುವಿಕೆ ಪ್ರಕರಣಗಳು ದಾಖಲಾಗಿವೆ ಎಂದು ಇರಾಕ್‌ನ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಅಗತ್ಯ ಚಿಕಿತ್ಸೆ ಕೊಡಲಾಗುತ್ತಿದ್ದು, ಕೆಲವರು ಉತ್ತಮ ಆರೋಗ್ಯದಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

(ಏಜೆನ್ಸೀಸ್)

ಪ್ರತಿ ವರ್ಷ ಆಗಸ್ಟ್​ನಲ್ಲಿ ನಜಾಫ್ ಹಾಗೂ ಕರ್ಬಾಲಾ ಯಾತ್ರಾ ಸ್ಥಳಗಳಿಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಸಲ ಸುಮಾರು 70 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಸಾವಿರಾರು ಯಾತ್ರಿಕರು ನೀರಿನ ಶುದ್ಧೀಕರಣ ಘಟಕದ ಸಮೀಪ ಶನಿವಾರ ರಾತ್ರಿ ತಂಗಿದ್ದರು. ಈ ಸಮಯದಲ್ಲಿ ಅನಿಲ ಸೋರಿಕೆಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net