

ಆವಾಹನಂ ಕಥಂ ದೇವ ತವ ಸರ್ವಗತಸ್ಯ ತು | ಸಂಸ್ಥಾಪನಂ ಕಥಂ ನು ಸ್ಯಾತ್ ಸನ್ನಿಧಾನಂ ಕಥಂ ಪ್ರಭೋ | ಕಸ್ಮಿನ್ ಮುಖೇ ಸಮರ್ಪ್ಯಂ ಸ್ಯಾನ್ನೈವೇದ್ಯಂ ತೇ ವದಸ್ವ ಮೇ || ಅಭೋಜ್ಯಂ ಭೋಜ್ಯಮಿತಿ ಚ ಕಥ್ಯತೇ ತೇ ನಿವೇದಿತಮ್ | ಭೋಜ್ಯಂ ಕೇಷಾಮಭೋಜ್ಯಂ ಚ ಕೇಷಾಂ ಸ್ಯಾತ್ ತದ್ವಿವೇಚಯ ||
ಇಷ್ಟಲಿಂಗದ ಅಳತೆ, ಪೂಜೆಯ ಪದ್ಧತಿ ಮತ್ತು ಪ್ರಕಾರ ಇತ್ಯಾದಿಗಳ ಬಗ್ಗೆ ಶಿವನಿಂದ ಆಲಿಸಿದ ನಂತರ ರುದ್ರನು ಹೇ ದೇವನೆ ! ನೀನು ಸರ್ವವ್ಯಾಪಿಯಾಗಿರುವೆ. ಆದುದರಿಂದ ನಿನ್ನನ್ನು ಒಂದು ಸ್ಥಾನದಲ್ಲಿ ಹೇಗೆ ಆಹ್ವಾನಿಸುವುದು? ಹೇ ಪ್ರಭುವೆ! ಎಲ್ಲ ಕಡೆಗೂ ನೀನು ಯಾವಾಗಲೂ ಇರುವುದರಿಂದ ಒಂದು ಸ್ಥಾನದಲ್ಲಿ ನಿನ್ನನ್ನು ಹೇಗೆ ಸಂಸ್ಥಾಪನೆ ಮಾಡುವುದು? ಮತ್ತು ಸಂಸ್ಥಾಪನೆ ಹಾಗೂ ’ಸನ್ನಿಧಾನ’ ವಿಧಿಗಳನ್ನು ಹೇಗೆ ಆಚರಿಸಬೇಕು? ನಿನ್ನ ಯಾವ ಮುಖದಲ್ಲಿ ನೈವೇದ್ಯವನ್ನು ಅರ್ಪಿಸಬೇಕು? ಎಂಬುದನ್ನು ಹೇಳು ಎಂದು ವಿನಂತಿಸಿಕೊಳ್ಳುತ್ತಾನೆ. ನಿನಗೆ ಅರ್ಪಿಸಿದ ನೈವೇದ್ಯವು ಕೆಲವರಿಗೆ ಸ್ವೀಕಾರಾರ್ಹವೂ ಮತ್ತೆ ಕೆಲವರಿಗೆ ಅಸ್ವೀಕಾರಾರ್ಹವೂ ಆಗಿದೆ ಎಂದು ಹೇಳಲಾಗಿದೆ. ಆದುದರಿಂದ ಯಾರು ಸ್ವೀಕರಿಸಬೇಕು ಎಂಬುದನ್ನು ವಿವೇಚನೆ ಮಾಡಿ ತಿಳಿಸುವುದಾಗಬೇಕು.
| ಮುಕುಟಾಗಮ (5. 1-3) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.