

ಅತ್ಯಾಶ್ರಮಂ ಪಾಶುಪತಂ ಶಾಂಭವಂ ತಚ್ಛಿರೋವ್ರತಂ |
ಇತ್ಯೇವಂ ನಾಮಭಿಃ ಪುಣ್ಯೈರ್ನಿಗಮಾಂತೇಷು ಗೀಯತೇ ||
ವೀರಶೈವರ ಪವಿತ್ರವಾದ ಮತ್ತು ಶ್ರೇಷ್ಠವಾದ ಈ ವ್ರತವನ್ನು ಉಪನಿಷತ್ತುಗಳಲ್ಲಿ ಅತ್ಯಾಶ್ರಮ, ಪಾಶುಪತ, ಶಾಂಭವ ಮೊದಲಾದ ಪುಣ್ಯನಾಮಗಳಿಂದ ಕರೆಯಲಾಗುತ್ತದೆ. ಬ್ರಾಹ್ಮಣಾದಿ ನಾಲ್ಕು ವರ್ಣ ಹಾಗೂ ಬ್ರಹ್ಮಚರ್ಯಾದಿ ನಾಲ್ಕು ಆಶ್ರಮಗಳಿಗಿಂತ ಶ್ರೇಷ್ಠವಾಗಿರುವುದರಿಂದ ಇದನ್ನು ಅತ್ಯಾಶ್ರಮವೆಂತಲೂ, ಆಣವಾದಿ ಮಲತ್ರಯರೂಪವಾದ ಪಾಶಗಳಿಂದ ಬಂಧಿತನಾದ ಪಶುರೂಪನಾದ ಜೀವಾತ್ಮನ ಪಾಶಗಳನ್ನು ಕಳೆದು ಹಾಕಿ ಪತಿ ರೂಪನಾದ ಪರಮಾತ್ಮನ ಪ್ರಾಪ್ತಿ ಮಾಡಿಕೊಡುವುದರಿಂದ ಪಾಶುಪತವೆಂತಲೂ ಮತ್ತು ಶಂಭುವಾದ ಶಿವನಿಗೆ ಸಂಬಂಧಿಸಿರುವುದರಿಂದ ಶಾಂಭವವೆಂತಲೂ ಕರೆಯಲಾಗುತ್ತದೆ.
| ಕಾರಣಾಗಮ (ಕ್ರಿ. ಪಾ. 1. 9) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.