ವೀರಶೈವಾಗಮ

Soul
Published on

ತಿತೀರ್ಷರ್ಜನ್ಮವಾರಾಶಿಂ ಗುರುಪೋತಂ ಸಮಾಶ್ರಯೇತ್ |

ಸಮ್ಯಕ್ ಪರೀಕ್ಷ್ಯ ವೈ ಶಿಷ್ಯಂ ಗೃಹ್ಣೀಯಾದ್ ದೇಶಿಕೋತ್ತಮಃ ||

ಜನನ ಮರಣವೆಂಬ ಸಂಸಾರ ಸಾಗರವನ್ನು ದಾಟಬೇಕಾದರೆ ಗುರು ಎಂಬ ನೌಕೆಯನ್ನು ಆಶ್ರಯಿಸಿಕೊಳ್ಳಬೇಕು. ಗುರುವಾದವನು ಕೂಡ ತನ್ನ ಬಳಿಗೆ ಬಂದ ಶಿಷ್ಯನನ್ನು ಚನ್ನಾಗಿ ಪರೀಕ್ಷಿಸಿ ಯೋಗ್ಯನೆನಿಸಿದರೆ ಮಾತ್ರ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ದೀಕ್ಷಾಸಂಸ್ಕಾರ ಮತ್ತು ಅದಕ್ಕೆ ಸಂಬಂಧಿಸಿದ ಜ್ಞಾನ ಹಾಗೂ ಆಚಾರಾದಿಗಳನ್ನು ಅನುಗ್ರಹಿಸಬೆಕು. ಮಂಗನ ಕೈಯಲ್ಲಿ ಮಾಣಿಕ್ಯವನ್ನು ನೀಡಿದರೆ ಅದು ಅದರ ಮಹತ್ವವನ್ನು ತಿಳಿಯದೇ ಹೇಗೆ ಅದನ್ನು ವ್ಯರ್ಥಗೊಳಿಸುತ್ತದೆಯೋ ಅದರಂತೆ ದುರ್ಬುದ್ಧಿ ಮತ್ತು ದುರಾಚಾರಿ ಮನುಷ್ಯನಿಗೆ ದೀಕ್ಷಾದಿಗಳನ್ನು ನೀಡಿದರೆ ಅದನ್ನು ಸದ್ಬಳಕೆಗೆ ಬದಲಾಗಿ ದುರ್ಬಳಕೆ ಮಾಡಿಕೊಳ್ಳುತ್ತಾನೆ.

| ಕಾರಣಾಗಮ (ಕ್ರಿ. ಪಾ. 1.7) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net