

ಭಾರತ ದೇಶದಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬುದಾಗಿ ನಾಲ್ಕು ಆಶ್ರಮ ಪದ್ಧತಿಗಳು ಪ್ರಚಲಿತದಲ್ಲಿವೆ. ಮನುಷ್ಯನ ಒಂದು ನೂರು ವರ್ಷ ಆಯುಷ್ಯದಲ್ಲಿ ಒಂದೊಂದು ಆಶ್ರಮಕ್ಕೆ 25 ವರ್ಷಗಳೆಂದು ಪರಿಗಣಿಸಲಾಗಿದೆ. ಈ ಆಶ್ರಮಗಳಲ್ಲಿ ಯಾವುದೇ ಆಶ್ರಮದಲ್ಲಿದ್ದರೂ ಶೀಘ್ರದಲ್ಲೇ ಮೋಕ್ಷ ಪಡೆಯಬಯಸುವ ವ್ಯಕ್ತಿಯು ಈ ವೀರಶೈವ ಶಾಂಭವ ವ್ರತವನ್ನು ಆಚರಿಸಬಹುದು. ಈ ಅವಕಾಶವು ಪುರುಷರಿಗೆ ಸೀಮಿತವಾಗಿಲ್ಲ. ಈ ವೀರಶೈವ ದೀಕ್ಷೆಯನ್ನು ಪಡೆಯಲು ಮಹಿಳೆಯರೂ ಪುರುಷರಷ್ಟೇ ಸಮಾನ ಅಧಿಕಾರ ಹೊಂದಿದ್ದಾರೆ. ಕಾರಣ ಇಲ್ಲಿ ಆಶ್ರಮ ಭೇದವಾಗಲಿ, ಲಿಂಗ ಭೇದವಾಗಲಿ ಇರುವುದಿಲ್ಲ.
| ಕಾರಣಾಗಮ (ಕ್ರಿ. ಪಾ. 1. 5 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.