ವೀರಶೈವಾಗಮ

shivalinga
Published on
ದೀಕ್ಷಾಕಾಲಪರಿಪ್ರಾಪ್ತಶಿವೈಕ್ಯಂ ಜೀವಭಾವತಃ | ಆವಿರ್ಭತಂ ವಿಜಾನಂತಿ ಮದೀಯಾಗಮವೇದಿನಃ ||

ದೀಕ್ಷೆಯನ್ನು ಪಡೆದುಕೊಳ್ಳುವ ಕಾಲದಲ್ಲಿ ಜೀವನು ಶಿವನಲ್ಲಿ ಒಂದಾಗುವ ಪರಿಯನ್ನು ಗುರುವು ಶಿಷ್ಯನಿಗೆ ಉಪದೇಶ ಮಾಡಿರುವುದರಿಂದ ದೀಕ್ಷಿತ ವ್ಯಕ್ತಿಯಲ್ಲಿ ಜೀವಭಾವ ಅಳಿದು ಶಿವಭಾವವು ಉಂಟಾಗುತ್ತದೆ ಎಂಬುದನ್ನು ಶಿವಾಗಮಗಳಲ್ಲಿ ನಿಷ್ಣಾತರಾದ ವಿದ್ವಾಂಸರು ಚೆನ್ನಾಗಿ ತಿಳಿದಿದ್ದಾರೆ. ದೀಕ್ಷೆಗಳಲ್ಲಿ ಕ್ರಿಯಾ ದೀಕ್ಷೆ, ಮಂತ್ರ ದೀಕ್ಷೆ ಮತ್ತು ವೇಧಾದೀಕ್ಷೆ ಎಂಬುದಾಗಿ ಮೂರು ವಿಧ. ಕ್ರಿಯಾ ದೀಕ್ಷೆಯಲ್ಲಿ ದೀಕ್ಷೆಗೆ ಸಂಬಂಧಿಸಿದ ಆಗಮಿಕ ಕ್ರಿಯಾ ಕಲಾಪಗಳು ಶಾಸ್ತ್ರೋತ್ತವಾಗಿ ನೆರವೇರಿದರೆ, ಮಂತ್ರ ದೀಕ್ಷೆಯಲ್ಲಿ ಶಿಷ್ಯನ ಬಲಗಿವಿಯಲ್ಲಿ ಗುರುವು ಶಿವಪಂಚಾಕ್ಷರಿ ಮಂತ್ರವನ್ನು ಉಪದೇಶಿಸುತ್ತಾನೆ.

ಮುಂದುವರಿದು ವೇಧಾದೀಕ್ಷೆಯಲ್ಲಿ ಗುರುವು ತನ್ನ ದಿವ್ಯವಾದ ಹಸ್ತಗಳ ಮೂಲಕ ಶಿಷ್ಯನ ಮಸ್ತಕವನ್ನು ರ್ಸ³ಸಿ ತನ್ನ ದಿವ್ಯವಾದ ದೃಷ್ಟಿಯಿಂದ ಅವನನ್ನು ಅವಲೋಕಿಸುವ ಮೂಲಕ ಅವನಲ್ಲಿರುವ ಜೀವಭಾವವನ್ನು ಕಳೆದು ಶಿವೋಠಹಂ ಭಾವನೆಯನ್ನು ಜಾಗೃತಗೊಳಿಸುತ್ತಾನೆ. ಈ ವೇಧಾದೀಕ್ಷೆಯಲ್ಲಿ ಜೀವ ಭಾವವು ದೂರ ಆಗಿರುವುದರಿಂದ ಮರಣಾ ನಂತರ ಅವನಿಗೆ ಪ್ರೇತ ಭಾವವು ಆವರಿಸುವುದಿಲ್ಲ

| ಮುಕುಟಾಗಮ (ಚರ್ಯಾಪಾದ) -7. 5)/ ವ್ಯಾಖ್ಯಾನ: ಶ್ರೀಶೈಲಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net