

ವೀರಶೈವ ಶಿವಭಕ್ತನ ಮೃತ ದೇಹವನ್ನು ಶಾಸ್ತ್ರೋಕ್ತವಾಗಿ ಸಮಾಧಿ ಸ್ಥಳಕ್ಕೆ ತರುವ ಪೂರ್ವದಲ್ಲಿ ಯೋಗ್ಯವಾದ ಸ್ಥಳದಲ್ಲಿ ಸಮಾಧಿಯನ್ನು ಮಾಡಿಸಬೇಕು. ಶಿವ ದೇವಾಲಯದ ಹತ್ತಿರದಲ್ಲಿ, ಶಿವಾಲಯದ ಉದ್ಯಾನದಲ್ಲಿ, ಶಿವನ ಪುಣ್ಯಕ್ಷೇತ್ರದ ಹತ್ತಿರದಲ್ಲಿ, ಬಿಲ್ವವೃಕ್ಷದ ಬುಡದಲ್ಲಿ ಅಥವಾ ನದಿಯ ದಡದಲ್ಲಿ ಬುದ್ಧಿವಂತನಾದವನು ಸಮಾಧಿಯನ್ನು ಮಾಡಿಸಬೇಕು. ಯಾವುದೇ ಕಾರ್ಯಕ್ಕೆ ಆಗಲಿ ಉತ್ತಮ ಫಲ ಲಭಿಸಬೇಕಾದರೆ, ಅದಕ್ಕೆ ಮೊದಲು ಉತ್ತಮವಾದ ಸ್ಥಳದ ಅವಶ್ಯಕತೆ ಇರುತ್ತದೆ.
ಫಲವತ್ತಾದ ಭೂಮಿಯಲ್ಲಿ ಬಿತ್ತಿದ ಬೀಜವು ಮೊಳಕೆ ಒಡೆದು ಹುಲಸಾಗಿ ಬೆಳೆ ಬರುವಂತೆ ಉತ್ತಮ ಸ್ಥಳದಲ್ಲಿ ಮಾಡಿದ ಕಾರ್ಯ ಉತ್ತಮ ಫಲವನ್ನು ನೀಡುತ್ತದೆ. ಮೃತನಾದ ವ್ಯಕ್ತಿಗೆ ಸದ್ಗತಿ ಉಂಟಾಗಬೇಕಾದರೆ ಜೀವಿತಕಾಲದಲ್ಲಿ ಅವನು ಮಾಡಿದ ಉತ್ತಮ ಕಾರ್ಯಗಳ ಜೊತೆಗೆ ಅವನ ಪಾರ್ಥಿವ ದೇಹವನ್ನು ಉತ್ತಮ ಸ್ಥಳದಲ್ಲಿ ಶಾಸ್ತ್ರೋಕ್ತವಾಗಿ ಸಮಾಧಿ ಮಾಡುವುದು ಕೂಡ ಕಾರಣವಾಗುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಸ್ಥಳಗಳಲ್ಲಿ ಸಮಾಧಿಯನ್ನು ನಿರ್ವಿುಸಬೇಕು.
| ಮುಕುಟಾಗಮ (ಚರ್ಯಾಪಾದ -4-2 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.