ವೀರಶೈವಾಗಮ

shivalinga
ಸಾಂದರ್ಭಿಕ ಚಿತ್ರ
Published on
ಯಥಾ ಜ್ಞಾನೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷ್ಠಿತಮ್ | ತಥಾ ಕಮೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷ್ಠಿತಮ್ ||

ಇದರಂತೆ ಯಾವ ರೀತಿಯಾಗಿ ಜ್ಞಾನೇಂದ್ರಿಯ ರೂಪವಾದ ಅಂಗಗಳಲ್ಲಿ ಕ್ರಮವಾಗಿ ಲಿಂಗಗಳು ಪ್ರತಿಷ್ಠಿತವಾಗಿವೆಯೋ, ಹಾಗೆಯೇ ಕಮೇಂದ್ರಿಯರೂಪ ಅಂಗಗಳಲ್ಲಿಯೂ ಸಹ ಕ್ರಮವಾಗಿ ಲಿಂಗಗಳು ಪ್ರತಿಷ್ಠಿತವಾಗಿರುತ್ತವೆ. ಅರ್ಥಾತ್ ವಾಗ್ (ಮಾತು) ರೂಪವಾದ ಅಂಗದಲ್ಲಿ ಪ್ರಸಾದಲಿಂಗವು, ಕೈಗಳಲ್ಲಿ ಚರಲಿಂಗವು, ಪಾದ ರೂಪವಾದ ಅಂಗಗಳಲ್ಲಿ ಶಿವಲಿಂಗವು, ಗುದಸ್ಥಾನ ರೂಪದ ಅಂಗದಲ್ಲಿ ಗುರುಲಿಂಗವು ಮತ್ತು ಗುಪ್ತಾಂಗ ರೂಪದ ಅಂಗದಲ್ಲಿ ಆಚಾರಲಿಂಗದ ಭಾವನೆಯನ್ನು ತಾಳಬೇಕು ಎಂದರ್ಥ. ಶಬ್ದ ಸ್ಪರ್ಶಾದಿ ವಿಷಯಗಳನ್ನು ಜ್ಞಾನೇಂದ್ರಿಯಗಳ ಮೂಲಕ ಅನುಭವಿಸುವಾಗ ಮನಸ್ಸಿನಲ್ಲಿ ವಾಸನೆ ಜನಿಸುವಂತೆ, ಯಾವುದೇ ಕರ್ಮಗಳನ್ನು ಆಚರಿಸುವಾಗಲೂ ಅದರ ವಾಸನೆಯು ಮನಸ್ಸಿನಲ್ಲಿ ಜನ್ಮ ತಾಳುತ್ತದೆ ಮತ್ತು ಆ ಕರ್ಮವನ್ನು ಮಾಡುವಂತೆ ಪ್ರೇರೇಪಿಸುತ್ತಿರುತ್ತದೆ. ಕಾಲಾಂತರದಲ್ಲಿ ಇದುವೇ ಕರ್ಮ ಬಂಧನವಾಗಿ ಪರಿಣಮಿಸುತ್ತದೆ. ಇದರಿಂದ ಮುಕ್ತನಾಗಬೇಕಾದರೆ ಆಯಾ ಲಿಂಗಗಳಿಗೆ ಆಯಾ ಕರ್ಮಗಳನ್ನು ಅರ್ಪಿಸಿ ತನ್ನನ್ನು ಅಕರõ ಎಂದು ಭಾವಿಸಬೇಕು.

| ಮುಕುಟಾಗಮ (ಚರ್ಯಾಪಾದ)2. 29 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net