ವೀರಶೈವಾಗಮ

xr:d:DAF-5gXfxxE:2,j:62345499659166709,t:24030806
xr:d:DAF-5gXfxxE:2,j:62345499659166709,t:24030806
Published on

ಇಷ್ಟಲಿಂಗಂ ತು ಬಾಹ್ಯಾಂಗೇ ಪ್ರಾಣಲಿಂಗಂ ತಥಾಂತರೇ|

ಭಾವಲಿಂಗಂ ತಥೈವಾಸ್ಮಿನ್ನಾತ್ಮಾಂಗೇ ಸುಪ್ರತಿಷ್ಠಿತಮ್ ||

ಬಾಹ್ಯಾಂಗದಲ್ಲಿ ಅರ್ಥಾತ್ ಸ್ಥೂಲಶರೀರದಲ್ಲಿ ಇಷ್ಟಲಿಂಗ, ಅಂತರಾಂಗದಲ್ಲಿ ಅರ್ಥಾತ್ ಸೂಕ್ಷ್ಮಶರೀರದಲ್ಲಿ ಪ್ರಾಣಲಿಂಗ ಮತ್ತು ಆತ್ಮಾಂಗದಲ್ಲಿ ಅರ್ಥಾತ್ ಕಾರಣ ಶರೀರದಲ್ಲಿ ಭಾವಲಿಂಗ ಹೀಗೆ ಮೂರು ಶರೀರಗಳಲ್ಲಿ ಮೂರು ಲಿಂಗಗಳು ಪ್ರತಿಷ್ಠಿತವಾಗಿವೆ. ತನ್ನ ಅಂಗೈಯಲ್ಲಿ ಇರಿಸಿಕೊಂಡು ಶ್ರದ್ಧೆಯಿಂದ ಪೂಜಿಸುವವನ ಅನಿಷ್ಟಗಳನ್ನು ದೂರ ಮಾಡಿ ಅವನ ಇಷ್ಟಾರ್ಥವನ್ನು ಈಡೇರಿಸುವ ಲಿಂಗವೇ ಇಷ್ಟಲಿಂಗವಾಗಿದೆ.

ಶಿವಯೋಗಿಯು ಪ್ರಾಣಾಯಾಮ ಪ್ರಕ್ರಿಯೆಯಿಂದ ತನ್ನ ಯೋಗಸಾಧನೆಯ ಮೂಲಕ ಪ್ರಾಣ ಮತ್ತು ಅಪಾನ ವಾಯುಗಳ ಸಂಘಟಣೆಯನ್ನು ಮಾಡಿಕೊಂಡಾಗ ಅಲ್ಲಿ ಒಂದು ಜ್ಯೋತಿಯು ಉತ್ಪನ್ನವಾಗುತ್ತದೆ. ಯೋಗಿಗಳಿಗೆ ಮಾತ್ರ ಗೋಚರಿಸುವ ಈ ಜ್ಯೋತಿಯನ್ನು ವೀರಶೈವ ದರ್ಶನದಲ್ಲಿ ಪ್ರಾಣಲಿಂಗವೆಂದು ಕರೆಯುತ್ತಾರೆ. ಈ ಜ್ಯೋತಿಯೇ ಸಾಧನೆಯ ಬಲದಿಂದ ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರದವರೆಗೆ ವಿಕಾಸವಾದಾಗ ಪ್ರಾಪಂಚಿಕ ಭಾವವು ಲಯವಾಗಿ, ಶಿವೋಹಂ ಭಾವನೆಯು ಜಾಗೃತವಾಗಲು ಕಾರಣವಾಗುವುದು. ಆಗ ಇದನ್ನು ಭಾವಲಿಂಗವೆಂದು ಕರೆಯುತ್ತಾರೆ.

| ಮುಕುಟಾಗಮ (ಚರ್ಯಾಪಾದ) 2. 26 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net