ವೀರಶೈವ ಸಮಾಜ ಸಂಘಟನೆ ಮಾಡುವೆ: ಅಶ್ವಿನ್

veerashaiva
ವೀರೈಶವ ಸಮಾಜದ ಮುಖಂಡ ಅಶ್ವಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಚ್.ಎಂ.ಚಂದ್ರಶೇಖರಪ್ಪ, ಬಸವರಾಜಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಜಿಲ್ಲೆಯ ಸಮಾಜದವರ ಪೈಕಿ ಬಹುತೇಕರಿಗೆ ನನ್ನ ಪರಿಚಯ ಇರಲಿಲ್ಲ. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಿಂದ ನನ್ನನ್ನು ಗುರುತಿಸಿದ್ದಾರೆ. ಮತಯಾಚನೆಗೆ ತೆರಳಿದಾಗ ಸಮಾಜದವರ ಕಷ್ಟಗಳನ್ನು ಅರಿತಿದ್ದೇನೆ. ಈಗ ನಾನು ಸೋತಿದ್ದರೂ ಎಂದಿಗೂ ಸಮಾಜದ ಜತೆಗಿರುತ್ತೇನೆ ಎಂದು ಮಹಾಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಅಶ್ವಿನ್ ಹೇಳಿದರು.

ಜು.21ರಂದು ಮೊದಲ ಬಾರಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನಾನು ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಜಿಲ್ಲೆ ಹಾಗೂ ತಾಲೂಕು ಘಟಕಗಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಸಹಕಾರ ನೀಡುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾಸಭಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಈಗ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿದ್ದಾರೆ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಮಠಾಧೀಶರು ಸಹ ಮಹಾಸಭಾ ಸದಸ್ಯರಾಗಬೇಕು. ಈಗಿರುವ ಸದಸ್ಯತ್ವ ಶುಲ್ಕವನ್ನು 10 ರೂ.ಗೆ ಇಳಿಸಿ ಪ್ರತಿಯೊಬ್ಬರೂ ಸದಸ್ಯರಾಗುವಂತೆ ಮಾಡಬೇಕು. ಮಹಾಸಭಾ ಕೇವಲ ಶ್ರೀಮಂತರಿಗೆ ಮೀಸಲಾಗಬಾರದು. ಎಲ್ಲರೂ ಸೇರಿ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು.
ಪ್ರಮುಖರಾದ ಎಚ್.ಎಂ.ಸಂಗಯ್ಯ, ಬಸವರಾಜಪ್ಪ, ಸಿದ್ದನಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net