ಪರಪ್ಪನ ಅಗ್ರಹಾರದಲ್ಲಿದ್ದ ವೀರಪ್ಪನ್ ಸಹಚರ ವಿಧಿವಶ

mise madayya
Published on

ಬೆಂಗಳೂರು: ಕಳೆದ 34 ವರ್ಷದಿಂದ ಜೈಲಿನಲ್ಲಿರುವ ವೀರಪ್ಪನ್ ಸಹಚರ ಮೀಸೆ ಮಾದಯ್ಯ ಿಂದು ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮೀಸೆ ಮಾದಯ್ಯಗೆ ಈ ಹಿಂದೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯಾಗಿತ್ತು. ಉಳಿದ ಸಹಚರರಾದ ಸೈಮನ್ , ಬಿಲವೇಂದ್ರನ್ , ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು.

ಈಗ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿರುವ ಮೀಸೆ ಮಾದಯ್ಯನ ಮೃತದೇಹ ಸದ್ಯ ವಿಕ್ಟೋರಿಯಾ ಶವಾಗಾರದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net