

ರಾಣೆಬೆನ್ನೂರ: ಇಲ್ಲಿಯ ವರ್ತಕ ವೀರಣ್ಣ ಅಂಗಡಿ ಅವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರು ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳತೆಯನ್ನು ಮೈಗೂಡಿಸಿಕೊಂಡು ಧರ್ಮ ನಿಷ್ಠರಾಗಿದ್ದ ವೀರಣ್ಣ ಅಂಗಡಿ ಅವರ ಹಿರಿತನದಲ್ಲಿ ರಾಣೆಬೆನ್ನೂರಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ದಸರಾ ಧರ್ಮ ಸಮಾರಂಭ 2005ರಲ್ಲಿ ನಡೆದದ್ದು ತಮ್ಮ ಮನದಾಳದಲ್ಲಿದೆ. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಅವರು ಶ್ರೀ ರಂಭಾಪುರಿ ಪೀಠದ ಮೇಲೆ ಅಪಾರ ಅಭಿಮಾನ ಹೊಂದಿದ್ದರಲ್ಲದೇ ನಿರಂತರ ಸಂಪರ್ಕದಲ್ಲಿರುತ್ತಿದ್ದರು.
ಅಂಗಡಿ ವೀರಣ್ಣನವರ ಅಗಲಿಕೆ ತಮಗೆ ನೋವನ್ನುಂಟು ಮಾಡಿದೆ. ದಯಾನನಾದ ಪರಮಾತ್ಮನು ಅಗಲಿದ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಶ್ರೀಯವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.