

ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ವೀರನಗೌಡ ಲೆಕ್ಕೆಹಾಳ ಅವರನ್ನು ನೇಮಕ ಮಾಡಿ ರಾಜ್ಯ ನಾಯಕರು ಆದೇಶ ನೀಡಿದ್ದಾರೆಂದು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಬಿಜೆಪಿ ಜಿಲ್ಲಾಧ್ಯಕ್ಷನ್ನಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿರುವೆ.
ನೂತನ ಅಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಿ ಬೆಳೆಸುತ್ತಾರೆಂಬ ನಂಬಿಕೆ ಇದ್ದು, ನಾನು ಸಹ ಇವರಿಗೆ ಸಂಪೂರ್ಣವಾಗಿ ಸಹಕಾರ ಬೆಂಬಲ ನೀಡುತ್ತೇನೆಂದು ಭರವಸೆ ನೀಡಿದರು. ಬಿಜೆಪಿ ಪಕ್ಷ ದೇಶ,ರಾಜ್ಯ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಪಕ್ಷದ ಅಧ್ಯಕ್ಷರು ಯಾರೇ ಆಗಲಿ ಪಕ್ಷದ ಕಾರ್ಯಕರ್ತರು ಪಕ್ಷದ ಸಿದ್ದಂತ ಮತ್ತು ತತ್ವಗಳನ್ನು ಮೆಚ್ಚಿ ಪಕ್ಷದ ಬೆಳವಣಿಗೆಗೆ ರಾತ್ರಿ ಹಗಲು ದುಡಿಯುತ್ತಾರೆಂದರು. ಪಕ್ಷದ ಅಧ್ಯಕ್ಷರ ಬದಲಾವಣೆಯಿಂದ ಯಾವುದೇ ಗೊಂದಲವಾಗುವುದಿಲ್ಲವೆAದರು.
ಈ ಸಂದರ್ಭದಲ್ಲಿ ಕಲ್ಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮಟ್ಟಿಮೂಡು,ಶಾಸಕ ಮಾನಪ್ಪ ವಜ್ಜಲ್,ಅಮರನಾಥ ಪಾಟೀಲ್,ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್,ಬಸನಗೌಡ ಬ್ಯಾಗವಾಟ್,ಗಂಗಾಧರ ನಾಯಕ,ರವಿ ಜಲ್ದಾರ್ ಇದ್ದರು.