ವೀರ ವರ್ಮ ಕಾಳಗ ಯಕ್ಷಗಾನ ಪ್ರದರ್ಶನ

sor yakshagana
ಸೊರಬ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ಕಲ್ಯಾಣ ಮಂದಿರದ ಆವರಣದಲ್ಲಿ ಶಿವಮೊಗ್ಗದ ಯಕ್ಷ ಸಂವರ್ಧನಾ ಸಂಘದಿಂದ ಪ್ರದರ್ಶನಗೊಂಡ ವೀರ ವರ್ಮ ಕಾಳಗ ಯಕ್ಷಗಾನ.
Published on

ಸೊರಬ: ಶ್ರೀ ರೇಣುಕಾಂಬಾ ದಸರಾ ಉತ್ಸವದ ಅಂಗವಾಗಿ ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ರಾತ್ರಿ ಶಿವಮೊಗ್ಗದ ಯಕ್ಷ ಸಂವರ್ಧನಾ ಸಂಘದಿಂದ ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದಲ್ಲಿ ಅರ್ಜುನ ಪಾತ್ರವನ್ನು ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ, ಕೃಷ್ಣನಾಗಿ ಸುಕ್ರುತ, ವೀರ ವರ್ಮನಾಗಿ ರವೀಶ್ ಹೆಗಡೆ, ಯಮನಾಗಿ ಪ್ರವೀಣ ಹೆಗಡೆ ತಟ್ಟೀಸರ, ಮಾಲಿನಿಯಾಗಿ ಉಷಾರಾಣಿ, ತಾಮ್ರಧ್ವಜನಾಗಿ ಗೋವಿಂದ ನಾಯಕ್, ಕೋಲಾ ಪಾತ್ರದಲ್ಲಿ ಮಲ್ಲಿಕಾ ಭಟ್, ಋಷಿಕೇತು ಪಾತ್ರವನ್ನು ಅನಘಾ ಭಟ್ ನಿರ್ವಹಿಸಿದರು.
ಚುರುಕುನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಗೋವಿಂದ ನಾಯಕ್ ಅವರ ಹಾಸ್ಯ ಪಾತ್ರ ಸಕಾಲಿಕವಾಗಿತ್ತು. ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐಗಿನಬೈಲು ಭಾಗವತಿಕೆ, ನಾಗಭೂಷಣ ಅವರ ಮದ್ದಳೆ ವಾದನ, ಗಣೇಶ್ ಹೆಗಡೆ ಕೆರೆಕೈ ಅವರ ಚಂಡೆವಾದನ ಸಭಿಕರನ್ನು ಆಕರ್ಷಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net