ವೀರಚಕ್ರ ಪಡೆದಿದ್ದ ಕಾರ್ಗಿಲ್ ವೀರ ರಸ್ತೆ ಅಪಘಾತದಲ್ಲಿ ಮೃತ್ಯು…

kargil hero nomore
Published on

ನವದೆಹಲಿ: 1999 ರ ಕಾರ್ಗಿಲ್ ಸಂಘರ್ಷದಲ್ಲಿ ಅವರ ಪಾತ್ರಕ್ಕಾಗಿ ವೀರ ಚಕ್ರವನ್ನು ಪಡೆದ ಸುಬೇದಾರ್ ಮೇಜರ್ ತ್ಸೆವಾಂಗ್ ಮೊರುಪ್ ಅವರು ಕೇವಲ ಒಂದು ತಿಂಗಳ ಹಿಂದೆ ಉನ್ನತ ಶ್ರೇಣಿಯನ್ನು ಪಡೆದಿದ್ದರು. ಅವರನ್ನು ಲೇಹ್‌ನಲ್ಲಿ ನಿಯೋಜಿಸಲಾಗಿತ್ತು. ಅವರ ವಾಹನ ನಿಮು ಬಳಿ ಉರುಳಿ ರಸ್ತೆ ಅಪಘಾತದಲ್ಲಿ ನಿಧನರಾದರು.

ಸುಬೇದಾರ್ ಮೇಜರ್ ಮೊರೂಪ್ ಅವರು ಲೇಹ್‌ ಮೂಲದವರಾಗಿದ್ದು 2ನೇ ಲಡಾಖ್ ಸ್ಕೌಟ್ಸ್‌ಗೆ ಸೇರಿದವರಾಗಿದ್ದು ಅವರ ಪ್ರಾಯ ನಲವತ್ತು. ಶನಿವಾರ ರಾತ್ರಿ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಕಿಡ್ ಆಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಅವರ ಕುಟುಂಬವನ್ನು ಭೇಟಿಯಾಗಿ ಸೇನೆಯ ಪರವಾಗಿ ಸಾಂತ್ವನ ಹೇಳಿದರು.

20 ವರ್ಷಗಳ ಹಿಂದೆ ಚಿತ್ರವೊಂದಕ್ಕಾಗಿ ಅವರನ್ನು ಸಂದರ್ಶಿಸಿದ ಫೋನ್ಸೋಕ್ ಲಡಾಖಿ, ಅವರು ನಿರ್ಭೀತ ವ್ಯಕ್ತಿಯಾಗಿದ್ದರು ಮತ್ತು ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಅವರು ಅಪಾಯಕಾರಿ ಸಾಹಸವನ್ನು ಕೈಗೊಂಡಿರುವುದು ಆಶ್ಚರ್ಯವೇನಿಲ್ಲ ಎಂದು ಹೇಳುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net