

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಬಂಧಿಯಾಗಿರುವ ಪ್ರತಿಯೊಬ್ಬರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸ್ಟಾರ್ ಕ್ರೀಡಾಪಟುಗಳಂತೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಕಡೂರಿನ ವೇದಾ ಕೃಷ್ಣಮೂರ್ತಿ ಟಿಕ್‌ಟಾಕ್ ಮೂಲಕ ಮತ್ತಷ್ಟು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿಂದಲೂ ವೇದಾ ವಿವಿಧ ಬಗೆಯ ಟಿಕ್‌ಟಾಕ್ ವಿಡಿಯೋಗಳನ್ನು ಮಾಡಿದ್ದಾರೆ.
ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಮನೆಯಲ್ಲಿರುವಾಗ ಫಿಟ್ನೆಸ್ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ವೇದಾ ಹೇಳಿಕೊಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಫಿಟ್ನೆಸ್ ಎಕ್ಸಸೈಜ್‌ಗಳನ್ನು ವೇದಾ ತೋರಿಸಿಕೊಟ್ಟಿದ್ದರು. ಜತೆಗೆ ಸಹೋದರ, ಸೋದರ ಸಂಬಂಧಿಗಳಾದ ಎರಡು ಪುಟ್ಟ ಕಂದಮ್ಮಗಳೊಂದಿಗೆ ವಿವಿಧ ಸಂಗೀತ ಹಾಗೂ ಹಾಡುಗಳಿಗೆ ಟಿಕ್‌ಟಾಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.
27 ವರ್ಷದ ವೇದಾ ಕೃಷ್ಣಮೂರ್ತಿ ರಾಷ್ಟ್ರೀಯ ತಂಡದ ಪರ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8 ಅರ್ಧಶತಕ ಸೇರಿದಂತೆ 829 ರನ್ ಬಾರಿಸಿದರೆ, ಚುಟುಕು ಕ್ರಿಕೆಟ್‌ನಲ್ಲಿ 2 ಅರ್ಧಶತಕ ಒಳಗೊಂಡಂತೆ 875 ರನ್ ಕಲೆಹಾಕಿದ್ದಾರೆ. 2011ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಆಸ್ಟ್ರೇಲಿಯಾದ ಮಹಿಳಾ ಬಿಗ್ ಬಾಷ್ ಟಿ20 ಟೂರ್ನಿಯಲ್ಲೂ ಮಿಂಚಿದ್ದಾರೆ.