ವಿಬಿ ಜಿ ರಾಮ್​ ಜಿ ತಿದ್ದುಪಡಿ ಹಿಂಪಡೆಯಿರಿ

ನರೇಗಾ ಯೋಜನೆ ಹೆಸರು ಬದಲಾವಣೆ ಖಂಡಿಸಿ ಎಸ್​ಯುಸಿಐ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಎಸ್​ಯುಸಿಐ ಜಿಲ್ಲಾ ಪ್ರಮುಖರಾದ ಶರಣು ಗಡ್ಡಿ, ದ್ಯಾಮಣ್ಣ ಡೊಳ್ಳಿ, ಈರಪ್ಪ, ಲಕ್ಷ$್ಮಣ, ವೆಂಕಟೇಶ ರೆಡ್ಡಿ, ಮುನಿಯಪ್ಪ, ರಾಮಲಿಂಗ ಶಾಸ್ತ್ರಿ, ಶಂಕ್ರಮ್ಮ ಇದ್ದರು.
ನರೇಗಾ ಯೋಜನೆ ಹೆಸರು ಬದಲಾವಣೆ ಖಂಡಿಸಿ ಎಸ್​ಯುಸಿಐ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಎಸ್​ಯುಸಿಐ ಜಿಲ್ಲಾ ಪ್ರಮುಖರಾದ ಶರಣು ಗಡ್ಡಿ, ದ್ಯಾಮಣ್ಣ ಡೊಳ್ಳಿ, ಈರಪ್ಪ, ಲಕ್ಷ$್ಮಣ, ವೆಂಕಟೇಶ ರೆಡ್ಡಿ, ಮುನಿಯಪ್ಪ, ರಾಮಲಿಂಗ ಶಾಸ್ತ್ರಿ, ಶಂಕ್ರಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಯುಸಿಐ ಪದಾಧಿಕಾರಿಗಳಿಂದ ಪ್ರತಿಭಟನೆ
ಕೊಪ್ಪಳ: ದೇಶದ ಬೆನ್ನೆಲುಬಾದ ಕೃಷಿ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಬದುಕು ಇಂದು ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗಿರುವ ಕಾನೂನುಗಳನ್ನು ಕೈಬಿಡಬೇಕು ಮತ್ತು ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಎಸ್​ಯುಸಿಐ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಕಾರ್ಮಿಕರ ಪಾಲಿಗೆ ಮರಣಶಾಸನವಾಗಿರುವ ವಿಬಿ ಜಿ ರಾಮ್​ ಜಿ ಕಾಯ್ದೆ ಕೂಡಲೇ ಹಿಂಪಡೆಯಬೇಕು. ಕಾಯ್ದೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅವರ ಜೀವನೋಪಾಯಕ್ಕೆ ದೊಡ್ಡ ಹೊಡೆತ ನೀಡಲಿದೆ. ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿನ ಇತ್ತೀಚಿನ ಬದಲಾವಣೆಗಳು ಮತ್ತು ಅನುದಾನ ಕಡಿತ ಸರಿಯಲ್ಲವೆಂದು ಖಂಡಿಸಿದರು.
ಯೋಜನೆಯನ್ನು ಹಳೆಯ ಸ್ವರೂಪದಲ್ಲೇ ಸಮರ್ಪಕವಾಗಿ ಮರು ಸ್ಥಾಪಿಸಬೇಕು. ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ಕೆಲಸ ಸಿಗುವಂತೆ ಮಾಡಬೇಕು. ಬೆಲೆ ಏರಿಕೆಯ ಈ ಕಾಲದಲ್ಲಿ ಸದ್ಯ ನೀಡಲಾಗುತ್ತಿರುವ ಕೂಲಿ ಯಾವುದಕ್ಕೂ ಸಾಲದು. ಕೂಲಿ ಮೊತ್ತ ಹೆಚ್ಚಳ ಜತೆಗೆ ಕೆಲಸದ ದಿನಗಳನ್ನು 200ಕ್ಕೆ ಏರಿಸಬೇಕು. 600 ರೂ. ಕೂಲಿ ನೀಡಿ ಕಾರ್ಮಿಕರ ಆರ್ಥಿಕ ಭದ್ರತೆ ಕಾಪಾಡಬೇಕು. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಎಸ್​ಯುಸಿಐ ಜಿಲ್ಲಾ ಪ್ರಮುಖರಾದ ಶರಣು ಗಡ್ಡಿ, ದ್ಯಾಮಣ್ಣ ಡೊಳ್ಳಿ, ಈರಪ್ಪ, ಲಕ್ಷ$್ಮಣ, ವೆಂಕಟೇಶ ರೆಡ್ಡಿ, ಮುನಿಯಪ್ಪ, ರಾಮಲಿಂಗ ಶಾಸ್ತ್ರಿ, ಶಂಕ್ರಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net