

ತಾವರಗೇರಾ: ಸ್ವಂತ ಜಾಗ ಹೊಂದಿದ ನಿರ್ಗತಿಕರಿಗೆ ವಾತ್ಸಲ್ಯಯೋಜನೆಯಡಿ ಒಂದು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಶೇಖರ್ ನಾಯ್ಕ ಹೇಳಿದರು.
ಪಟ್ಟಣದ ಅನೂಸುಯಾ ಮೇಗಳಮನಿ ಅವರ ಮನೆಯ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಶುಕ್ರವಾರ ಮಾತನಾಡಿದರು. ಎಸ್‌ಕೆಡಿಆರ್‌ಡಿಪಿ ಸಂಘದಲ್ಲಿರುವ ಅಸಹಾಯಕರು ಮಾತ್ರ ವಾತ್ಸಲ್ಯ ಯೋಜನೆೆ ಸೌಲಭ್ಯ ಪಡೆಯಬಹುದು. ಪೂಜ್ಯಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಆಸೆಯಂತೆ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು.
ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಗುರುಮೂರ್ತಿ ಸ್ವಾಮಿ, ಒಕ್ಕೂಟದ ಅಧ್ಯಕ್ಷೆ ಕೌಸರ್,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿವಲಿಲಾ, ಮೇಲ್ವಿಚಾರಕ ಶಾಂತಮೂರ್ತಿ ಹಿರೇಮಠ, ಪ್ರಮುಖರಾದ ದೊಡ್ಡಪ್ಪ ಮೇಗಳಮನಿ, ಚೆನ್ನಪ್ಪ ಬುಡಕುಂಟಿ, ಭಾನು, ಗಂಗಾಧರಯ್ಯ, ಸೇವಾ ಪ್ರತಿನಿಧಿ, ಸಂಘದ ಸದಸ್ಯರು ಇದ್ದರು.