ವಾಟಾಳ್​ ನಾಗರಾಜ್ ಅವರ​ ಪತ್ನಿ ನಿಧನ; ನಾಳೆ ಅಂತ್ಯಕ್ರಿಯೆ

Vatal Nagaraj
Published on

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್​ ಅವರ ಪತ್ನಿ ಜ್ಞಾನಾಂಬಿಕೆ (60) ಕಿಡ್ನಿ ವೈಫಲ್ಯದಿಂದ ಇಂದು ನಿಧನರಾದರು.

ಶೇಷಾದ್ರಿಪುರಂನ ಆಸ್ಪತ್ರೆಯಲ್ಲಿ ಸಂಜೆ 7.30ರ ಹೊತ್ತಿಗೆ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಡಾಲರ್ಸ್​ ಕಾಲನಿಯಲ್ಲಿರುವ ವಾಟಾಳ್​ ನಾಗರಾಜ್​ ಅವರ ಮನೆಗೆ ಕೊಂಡೊಯ್ಯಲಾಗುವುದು.

ಬುಧವಾರ (ಆಗಸ್ಟ್​ 5) ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಕೊಂಡೊಯ್ದು ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ 16 ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net