

Kantara : ಈಗಾಗಲೇ ಕಾಂತಾರ ಚಾಪ್ಟರ್ 2 ಬಿಡುಗಡೆಯಾಗಿ ದೇಶಾದ್ಯಂತ ಸಂಚಲನ ಮೂಡಿಸಿದ್ದು, ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಅಧ್ಯಾಯ 1 ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದೇ ವರ್ಷ ಅಕ್ಟೋಬರ್ 2 ರಂದು ದೇಶಾದ್ಯಂತ ಬೆಳ್ಳಿತೆರೆಯ ಮೇಲೆ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 ಸಿನಿ ಪ್ರೇಕ್ಷಕರನ್ನು ರಂಜಿಸಲಿದೆ.
ಇದು ಕನ್ನಡ ಸಿನಿಮಾ ಆದರೆ, ಹಿಂದಿ ಸೇರಿದಂತೆ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗುವುದರಿಂದ ಬ್ಲಾಕ್ಬಸ್ಟರ್ ಆಗಿ ಪರಿವರ್ತನೆಯಾಗುವುದು ಖಚಿತ ಎಂದು ಅಭಿಮಾನಿಗಳು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆಗೆ ವರುಣ್ ಧವನ್ ಹಾಗೂ ಜಾಹ್ನವಿ ಕಪೂರ್ ಅಭಿನಯಿಸಿದ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಚಿತ್ರವು ಕೂಡ ಅವತ್ತೆ ಬಿಡುಗಡೆಯಾಗುವುದರಿಂದ ಕಾಂತಾರ ಚಿತ್ರಕ್ಕೂ ಈ ಸಿನಿಮಾ ನಡುವೆ ಪೈಪೋಟಿ ನಡೆಯಲಿದೆ ಎಂದು ಸುದ್ದಿಯಾಗುತ್ತಿದೆ.
ಇನ್ನು ಚಿತ್ರತಂಡ ವರುಣ್ ಧವನ್ ಹಾಗೂ ಜಾಹ್ನವಿ ಕಪೂರ್ ಇರುವ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಇವರ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದು, ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಚಿತ್ರದಲ್ಲಿ ಯಾವುದೇ ಅಡತಡೆಯಾಗಬಾರದು ಎಂದು ನೆಟ್ಟಿಗರು ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಚಿತ್ರಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಕಾಂತಾರ ಸಿನಿಮಾ ಅಂದೇ ಬಿಡುಗಡೆಯಾಗುತ್ತಿರುವುದರಿಂದ ಘರ್ಷಣೆಯಾಗುತ್ತದೆ. ಒಂದೇ ಸಿನಿಮಾ ಬಿಡುಗಡೆ ಮಾಡಿ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇನ್ನೊಬ್ಬ ಈ ಸಿನಿಮಾ ಕಾಂತಾರದೊಂದಿಗೆ ಪೈಪೋಟಿ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. (ಏಜೆನ್ಸೀಸ್)