ವರ್ತೂರು ಪ್ರಕಾಶ್ ಅಪಹರಣದ ಹಿಂದೆ ಲೇಡಿ ಕೈವಾಡ? ಕಾರಿನಲ್ಲಿ ಸಿಕ್ಕ ವಸ್ತುವಿನಿಂದ ಹೆಚ್ಚಾದ ಅನುಮಾನ

vartur prakash
Published on

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್​ ಅವರ ಅಪಹರಣ ಪ್ರಕರಣದಲ್ಲಿ ಹಲವಾರು ಅನುಮಾನಗಳು ಆರಂಭವಾಗಿವೆ. ನಾಯಕರನ್ನು ಅಪಹರಣ ಮಾಡಿದ್ದ ಕಾರು ಬೆಳ್ಳಂದೂರಿನಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬೆಳ್ಳಂದೂರಿನ ಹಾಲನಾಯಕನಹಳ್ಳಿ ಸ್ಮಶಾನದ ಬಳಿ ಕಾರ್ ಪತ್ತೆಯಾಗಿದೆ. ಪ್ರಕಾಶ್​ ಅವರಿಗೆ ಸೇರಿರುವ ಈ ಕಾರಿನ ಒಳಭಾಗದಲ್ಲಿ ಕಾರದ ಪುಡಿ ಎರಚಿರುವುದು ಕಂಡುಬಂದಿದೆ. ಕಾರಿನಲ್ಲಿ ಒಂದು ದುಪ್ಪಟ್ಟವೂ ಕಂಡುಬಂದಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಪಹರಣದ ಪ್ರಕರಣದಲ್ಲಿ ಹೆಣ್ಣಿನ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಅಥವಾ ತನಿಖೆಯ ಹಾದಿ ತಪ್ಪಿಸುವ ಸಲುವಾಗಿಯೇ ದುಪ್ಪಟ್ಟು ಇಟ್ಟು ಹೋಗಿರಬಹುದು ಎನ್ನುವ ಸಂಶಯವೂ ಇದೆ.

ಅಪಹರಣದ ನಂತರವ ವರ್ತೂರು ಪ್ರಕಾಶ್ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಗೃಹ ಸಚಿವರು ಆದೇಶಿಸಿದ್ದು, ಕೋಲಾರ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net