ವರ್ತೂರಿನಲ್ಲಿ ಮೈಸೂರು ಮಾದರಿಯಲ್ಲೇ ಅದ್ಧೂರಿ ದಸರಾ ಉತ್ಸವ ಆಚರಣೆ: ಜೈ ಶ್ರೀರಾಮ್ ಸೇವಾ ಸಮಿತಿ ನೇತೃತ್ವ.

vartur
Published on

ಬೆಂಗಳೂರು: ಮೈಸೂರಿಲ್ಲಿ ನಡೆಯುವ ದಸರಾ ಹಬ್ಬದ ಆಚರಣೆ ಮಾದರಿಯಲ್ಲೇ ಜೈ ಶ್ರೀರಾಮ್ ಸೇವಾ ಸಮಿತಿಯು ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಅದೇ ರೀತಿಯ ಸಾಂಪ್ರದಾಯಕ ದಸರಾ ಆಚರಣೆ ಮಾಡಲು ತಿರ್ಮಾನಿಸಿದ್ದು, 3ನೇ ವರ್ಷದ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ನೇರವೇರಿಸಲಿದ್ದೇವೆ ಎಂದು ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದ್ದಾರೆ.

ಇಂದಿನಿಂದ 5 ದಿನಗಳ ಕಾಲ ಮಹೋತ್ಸವ ನಡೆಯಲಿದೆ. ಮೊದಲ ದಿನವಾದ ಮಂಗಳವಾರ 500 ಕ್ಕೂ ಹೆಚ್ಚು ಮಹಿಳೆಯರು ಕಳಶಹೊತ್ತು ದುರ್ಗಾ ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿಯ ಉತ್ಸವ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ವರ್ತೂರಿನಲ್ಲಿ ನಡೆಯುವ ಉತ್ಸವ ಇಡೀ ರಾಜ್ಯದಲ್ಲೆ ಹೆಸರುವಾಸಿಯಾಗಲಿದೆ.ಈ ದಸರಾ ಉತ್ಸವ ಬೇರೆಡೆ ಮಾಡುವ ಉತ್ಸವಗಳಿಗಿಂತ ವಿಭಿನ್ನವಾಗಿದೆ.ವರ್ತೂರಿನಲ್ಲಿ ಕಳೆದ 2 ವರ್ಷಳಿಂದ ನಡೆಸಿರುವ ದಸಾರ ಉತ್ಸವದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಜೈ ಶ್ರೀರಾಮ್ ಸೇವಾ ಸಮಿಗೆ ಮತ್ತಷ್ಟು ಜವಬ್ದಾರಿ ಹೆಚ್ಚಿದೆ.ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಆಚರಿಸಲು ತಿರ್ಮಾನಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಶಿವರಾಜ್ ತಂಗಡಗಿ,ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರು, ಗಾಯಕ ಗಾಯಕಿಯರು, ಕಳೆದ ಬಿಗ್‌ಬಾಸ್‌ನಲ್ಲಿ ಭಗವಹಿಸಿದ್ದ ಸ್ಪರ್ಧಿಗಳು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ಈ ಅದ್ಧೂರಿ ಉತ್ಸವದಲ್ಲಿ ವರ್ತೂರು ಸೇರಿದಂತೆ ಮಹದೇವಪುರ ಕ್ಷೇತ್ರದ ನಿವಾಸಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು. 5 ದಿನಗಳ ಕಾಲ ಸಂಪೂರ್ಣ ಮನರಂಜೆ ನೀಡಲು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದೆ. ಇದರ ಜವಬ್ದಾರಿಯನ್ನು ಪದಾಧಿಕಾರಿಗಳು ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net