ವಿವಿಧ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

9-RNR-04
Published on

ರಾಣೆಬೆನ್ನೂರ: ನಗರದ ಕೆಎಲ್​ಇ ಸಂಸ್ಥೆಯ ರಾಜ&ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ&ಪೂರ್ವ ಕಾಲೇಜ್​ನ ವಿದ್ಯಾಥಿರ್ನಿಯರು ತಾಲೂಕು ಮಟ್ಟದ ಪದವಿ&ಪೂರ್ವ ಕಾಲೇಜ್​ಗಳ ಕ್ರೀಡಾಕೂಟದಲ್ಲಿ ಗುಂಪು ಮತ್ತು ವೈಯಕ್ತಿಕ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿವಿಧ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಆಟಗಳು: ಖೋ&ಖೋ, ಕಬಡ್ಡಿ, ವಾಲಿಬಾಲ್​ ಹಾಗೂ 4*400 ರೀಲೆ ಪ್ರಥಮ ಸ್ಥಾನ, ಬಾಲ್​&ಬ್ಯಾಡ್ಮಿಂಟನ್​ ದ್ವೀತಿಯ ಸ್ಥಾನ.
ವೈಯಕ್ತಿಕ ಆಟಗಳು: 400, 800, ಮೀಟರ್​ ಓಟದಲ್ಲಿ ಶೀವಲಿಲಾ ಮಕರಬ್ಬಿ ಪ್ರಥಮ ಸ್ಥಾನ, 1500, 3 ಸಾವಿರ ಮೀಟರ್​ ಓಟದಲ್ಲಿ ಸುಮಂಗಲಾ ಕರಿಯಣ್ಣನವರ ಪ್ರಥಮ ಸ್ಥಾನ, 1500 ಮೀಟರ್​ ಓಟದಲ್ಲಿ ಭೂಮಿಕಾ ಖಂಡೆಪ್ಪನವರ ದ್ವೀತಿಯ ಸ್ಥಾನ, ಚಕ್ರ ಎಸೆತ, ಬಚಿರ್ ಎಸೆತದಲ್ಲಿ ದೀಪಾ ದೊಡ್ಡಗೌಡ್ರ ಪ್ರಥಮ ಸ್ಥಾನ, ಬಚಿರ್ ಎಸೆತ, ವೇಗದ ನಡಿಗೆಯಲ್ಲಿ ಲಕ್ಷಿ$್ಮ ಮೇದಾರ ದ್ವೀತಿಯ ಸ್ಥಾನ,
ವೇಗದ ನಡಿಗೆ ಶಶಿಕಲಾ ಹಿತ್ತಲಮನಿ ಪ್ರಥಮ ಸ್ಥಾನ, ಗುಡ್ಡಗಾಡು ಓಟದಲ್ಲಿ ಸಂಗೀತಾ ಮತ್ತು ಅನು ಗ್ವಾರಪ್ಪನವರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಗಳಿಸಿದ ವಿದ್ಯಾಥಿರ್ಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜ್​ನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net