ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನೌಕರರ ಪ್ರತಿಭಟನೆ

oplus_2
oplus_2
Published on

ರಾಣೆಬೆನ್ನೂರ: ನಗರಸಭೆ ಪೌರ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಿ ಸಕಲ ಸರ್ಕಾರಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಪೌರ ನೌಕರರ ಸಂದ ತಾಲೂಕು ಟಕದ ವತಿಯಿಂದ ನಗರದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ಕೈಗೆ ಕಪು$್ಪ ಪಟ್ಟಿ ಕಟ್ಟಿಕೊಂಡು ನಗರಸಭೆ ಎದುರು ಧರಣಿ ನಡೆಸಿದರು. ಪೌರ ನೌಕರರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಗರಸಭೆ ಸೇರಿ ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾಮಿರ್ಕರು, ಲೋಡರ್​ಗಳು, ಕ್ಲೀನರ್​ಗಳು, ನೀರು ಸರಬರಾಜುದಾರರು, ಉದ್ಯಾನ ನಿರ್ವಾಹಕರು ಸೇರಿ ಎಲ್ಲ ನೌಕರರನ್ನು ಸರ್ಕಾರಿ ನೌಕರನ್ನಾಗಿ ಘೋಷಿಸಬೇಕು. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು.

ನಮ್ಮ ಬೇಡಿಕೆ ಈಡೇರಿಸುವ ಸಲುವಾಗಿ ಈ ಹಿಂದೆ ಹಲವಾರು ಬಾರಿ ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಬಾರಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಏಳುಕೋಟೆಪ್ಪ ಗೋಣಿಬಸಮ್ಮನವರ, ಮಾದವ ಸಾತೇನಹಳ್ಳಿ, ಆರ್​.ಎಂ. ಮಂಜುನಾಥ, ಪ್ರಭು ಬಾಲೆಹೊಸೂರ, ಎಸ್​.ಪಿ. ದೊಡ್ಡಮನಿ, ಎನ್​.ಬಿ. ಕೋರಿ, ನಿಂಗಪ್ಪ ಮಧುಕರಿಯಪ್ಪನವರ, ದಿಳ್ಳೆಪ್ಪ ಅಂಕಸಾಪುರ, ನಿಖಿತಾ ಮೆಣಸಿನಹಾಳ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net