

ರಾಣೆಬೆನ್ನೂರ: ನಿವೃತ್ತ ಕಾಮಿರ್ಕರಿಗೆ ಕುಟುಂಬ ಪಿಂಚಣಿ ಸೌಲಭ್ಯ ಕೊಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಿವೃತ್ತ ಕಟ್ಟಡ ಕಾಮಿರ್ಕರು ಬುಧವಾರ ನಗರದ ಕಾಮಿರ್ಕರ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಕಾಮಿರ್ಕರಾಗಿ ಕುಟುಂಬ ಪಿಂಚಣಿ ಸೌಲಭ್ಯ, ನಿವೃತ್ತರಿಗಾಗಿ ಪಿಂಚಣಿ ಸೌಲಭ್ಯ ಸೇರಿ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ, ಕಾಮಿರ್ಕರಿಗೆ ಈ ಯಾವ ಸೌಲಭ್ಯ ದೊರೆಯುತ್ತಿಲ್ಲ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದಿಂದ ಟೂಲ್ ಕಿಟ್ಗಳು ಬಂದು ಬಹಳಷ್ಟು ದಿನಗಳಾದರೂ ಇಂದಿಗೂ ವಿತರಣೆ ಮಾಡಿಲ್ಲ. ಮಹಿಳೆಯರಿಗೆ ಹೆರಿಗೆ ಸೌಲಭ್ಯ, ಮದುವೆ ಸಹಾಯಧನ, ವೈದ್ಯಕಿಯ ಸಹಾಯಧನ, ತಾಯಿ ಮಗು ಸಹಾಯ ಹಸ್ತ ಸೇರಿ ಯಾವ ಸೌಲಭ್ಯಗಳು ಕಾಮಿರ್ಕರಿಗೆ ದೊರೆಯುತ್ತಿಲ್ಲ. ಅಧಿಕಾರಿಗಳು ಇಲ್ಲಸಲ್ಲದ ನೆಪಹೇಳಿ ನಿಜವಾದ ಕಾಮಿರ್ಕರನ್ನು ಕಾರ್ಡ್ಗಳನ್ನು ರದ್ದುಪಡಿಸಿದ್ದಾರೆ. ಕಾಮಿರ್ಕರಲ್ಲ ಕಾರ್ಡ್ಗಳು ಇಂದಿಗೂ ಜಾಲ್ತಿಯಲ್ಲಿವೆ. ಇದರಿಂದಾಗಿ ನಿಜವಾದ ಕಾಮಿರ್ಕರು ವಿವಿಧ ಸಮಸ್ಯೆ ಎದುರಿಸಬೇಕಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಾಮಿರ್ಕರ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾಮಿರ್ಕರ ಸಂದ ರಾಜ್ಯಾಧ್ಯಕ್ಷ ಲೋಕೇಶ ನಾಯಕ, ಪ್ರಮುಖರಾದ ಬಸೀರಸಾಬ ತೆರದಹಳ್ಳಿ, ಬಸೀರಅಹ್ಮದ್ ಹತ್ತಿಮತ್ತೂರ, ಗುಡ್ಡಪ್ಪ ಹೊನ್ನತ್ತಿ, ಕರಿಯಲ್ಲಪ್ಪ ಮಡಿವಾಳರ, ಅಬ್ದುಲ್ ಮಕರಿ, ರೇಣುಕಾ ಲಮಾಣಿ, ಶ್ರೀನಿವಾಸಾಚಾರ್ಯ ಬಡಿಗೇರ, ರಾಜಾಸಾಬ ಮಲ್ಲಾಡದ, ವಾಸಪ್ಪ ಯರೇಶೀಮಿ ಮತ್ತಿತರರು ಪಾಲ್ಗೊಂಡಿದ್ದರು.